ದೊಡ್ಡವರ ಹರಕೆ, ಮಕ್ಕಳ ಆಟಿಕೆ ಈ ಸೌತಡ್ಕದ ಗಂಟೆ: ಒಮ್ಮೆ ಬನ್ನಿ ಸೌತಡ್ಕ ಅನ್ನೋ ಗಣಪನ ಊರಿಗೆ

ಚಿತ್ರ ಬರಹ: ಚೈತನ್ಯ ಕುಡಿನಲ್ಲಿ ಭಾರತದಂತಹ ಧಾರ್ಮಿಕ ನೆಲೆಗಟ್ಟಿನ ದೇಶದಲ್ಲಿ ಪ್ರಸಿದ್ಧ ದೇವಸ್ಥಾನಗಳು ಹಾಗೂ ತೀರ್ಥಕ್ಷೇತ್ರಗಳು ಸದಾ ಜನಜಂಗುಳಿಯಿಂದ ಕೂಡಿರುವುದು ಸರ್ವೇಸಾಮಾನ್ಯ. ಅದರಲ್ಲೂ ರಜೆ ದಿವಸಗಳಲ್ಲಂತೂ ದೇವರಿಗೆ ಫುಲ್ ಡಿಮ್ಯಾಂಡ್. ಪತ್ರಿಕೆಯ ಪರಿಭಾಷೆಯಲ್ಲಿ ಹೇಳುವುದಾದರೆ ಜನಸಾಗರವೇ ಹರಿದು ಬಂದಿರುತ್ತದೆ. ಈ ಜನಸಾಗರದ ಭೋರ್ಗರೆತ, ಘಂಟೆ-ಜಾಗಟೆಗಳ ಪ್ರತಿಧ್ವನಿ ಹಾಗೂ ಅರ್ಚಕರುಚ್ಛರಿಸುವ ವೇದಮಂತ್ರದ ನಡುವೆ ಪುಟಾಣಿ ಮಕ್ಕಳ ಅಳುವಿನ ಧ್ವನಿಯೂ ದೇವಸ್ಥಾನದ ಪರಿಸರವನ್ನು ಆವರಿಸಿರುತ್ತದೆ. ಜನದಟ್ಟನೆಯಿಂದ ಉಂಟಾದ ಗಾಬರಿ ಹಾಗೂ ತಾಳಲಾರದ ಸೆಕೆಯಿಂದ ಅಳುವ ಎಳೆಯ ಕೂಸುಗಳಿಗೆ ಗಾಳಿ ಹಾಕುತ್ತಾ […]