ಉಡುಪಿ: ಸೆಂಟ್ರಲ್‌ ಗವರ್ನ್‌ಮೆಂಟ್‌ ಹೆಲ್ತ್‌ ಸ್ಕೀಮ್‌ ವೆಲ್ನೆಸ್‌ ಸೆಂಟರ್‌ ಗೆ ಕೇಂದ್ರದ ಅನುಮೋದನೆ

ಉಡುಪಿ: ಭಾರತ ಸರಕಾರದ ನಿವೃತ್ತ ನೌಕರರ ಬಹುದಿನದ ಬೇಡಿಕೆಯಾದ ಸೆಂಟ್ರಲ್‌ ಗವರ್ನ್‌ಮೆಂಟ್‌ ಹೆಲ್ತ್‌ ಸ್ಕೀಮ್‌ (CGHS) ವೆಲ್ನೆಸ್‌ ಸೆಂಟರ್‌ ಅನ್ನು ಉಡುಪಿಯಲ್ಲಿ ತೆರೆಯಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಆಹಾರ ಸಂಸ್ಕರಣಾ ಉದ್ಯಮಗಳ ರಾಜ್ಯ ಖಾತೆ ಸಚಿವರೂ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದರಾದ ಶೋಭಾ ಕರಂದ್ಲಾಜೆ ಅವರ ಪ್ರಯತ್ನದಿಂದ ಬಹುದಿನದ ಬೇಡಿಕೆ ಈಡೇರಿದ್ದು, ಫೆಬ್ರವರಿ 2023ರಲ್ಲಿ ಕೇಂದ್ರ ಆರೋಗ್ಯ ಸಚಿವರಿಗೆ ಭೇಟಿಯಾಗಿ ಉಡುಪಿಯಲ್ಲಿ […]