ಸ್ನ್ಯಾಪ್‌ಚಾಟ್ ಹಾಗೂ ಇನ್ಸ್ಟಾಗ್ರಾಂ ಗಳಲ್ಲಿ ಅಪ್ರಾಪ್ತ ಬಾಲಕಿ ಹಾಗೂ ಯುವತಿಯ ತೇಜೋವಧೆ: ಸೆನ್ ಠಾಣೆಯಲ್ಲಿ ದೂರು ದಾಖಲು

ಉಡುಪಿ: ಇಲ್ಲಿನ 14 ವರ್ಷದ ಬಾಲಕಿಯೊಬ್ಬಳ ಪೋಷಕರು ತಮ್ಮ ಮಗಳ ಫೋಟೋವನ್ನು ಅಸಭ್ಯ ರೀತಿಯಲ್ಲಿ ರೂಪಾಂತರಿಸಿ(ಮಾರ್ಫ್) ಸ್ನ್ಯಾಪ್‌ಚಾಟ್‌ ವೀಡಿಯೋನಲ್ಲಿ ಪ್ರಸಾರ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಉಡುಪಿ ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಬಾಲಕಿಯ ತಾಯಿ, ತನ್ನ ಮಗಳ ಫೋಟೋವನ್ನು ಅಸಭ್ಯ ವೀಡಿಯೊದಲ್ಲಿ ಬಳಸಿದ್ದಾರೆ ಮತ್ತು ಜುಲೈ 30 ರಂದು ಸ್ನ್ಯಾಪ್‌ಚಾಟ್‌ನಲ್ಲಿ ತನ್ನ ಸಂಪರ್ಕಗಳಿಗೆ ಪ್ರಸಾರ ಮಾಡಿದ್ದಾರೆ ಎಂದು ಹೇಳಿದ್ದಾರೆ. ನಕಲಿ ಸ್ನ್ಯಾಪ್‌ಚಾಟ್ ಖಾತೆಯನ್ನು ಬಳಸಿಕೊಂಡು ವೀಡಿಯೊವನ್ನು ಪ್ರಸಾರ […]

ಮಣಿಪಾಲ: ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಮಣಿಪಾಲ: ಶಿವಳ್ಳಿ ಗ್ರಾಮದ ಇಂದಿರಾ ಶಿವರಾಮ್ ಪಾಲಿಟೆಕ್ನಿಕ್ ಕಾಲೇಜಿನ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಉಡುಪಿ ಸೆನ್ ಮತ್ತು ಪಿಐ ಪೊಲೀಸ್ ತಂಡವು ಎ.2 ರಂದು ಬಂಧಿಸಿದ್ದಾರೆ. ಬಂಧಿತನಿಂದ 2.110 ಕೆಜಿ ಗಾಂಜಾ ಹಾಗೂ 1 ಮೊಬೈಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಅಕ್ಷಯ್ ಹಾಕೆ ತಿಳಿಸಿದ್ದಾರೆ.