ಸಿ.ಬಿ.ಎಸ್.ಸಿ ಫಲಿತಾಂಶ: ಜಿಎಮ್ ವಿದ್ಯಾಸಂಸ್ಥೆಗೆ ಶೇ.100 ಫಲಿತಾಂಶ
ಬ್ರಹ್ಮಾವರ: 2022-23 ನೇ ಸಾಲಿನ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ 10 ನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು, ಬ್ರಹ್ಮಾವರದ ಜಿಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಿಂದ ಒಟ್ಟು 218 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅತ್ಯುತ್ತಮ ಫಲಿತಾಂಶದೊಂದಿಗೆ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರತಿವರ್ಶದಂತೆ ವಿದ್ಯಾರ್ಥಿಗಳು ಈ ಬಾರಿಯೂ ಶೇ.100 ಫಲಿತಾಂಶ ಪಡೆದುಕೊಂಡಿರುತ್ತಾರೆ. ಶಾಲೆಯ ಈ ಶೈಕ್ಷಣಿಕ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರು, ಶಾಲಾ ಪ್ರಾಂಶುಪಾಲರು, ಶೈಕ್ಷಣಿಕ ನಿರ್ದೇಶಕರು ವಿದ್ಯಾರ್ಥಿಗಳನ್ನು, […]
ಸಿ.ಬಿ.ಎಸ್.ಇ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ
ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, ಗುರುವಾರ 2023 ರ ಬೋರ್ಡ್ ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿವರವಾದ ಬೋರ್ಡ್ ಶೀಟ್ ಈಗ ಅಧಿಕೃತ ಸಿ.ಬಿ.ಎಸ್.ಇ ವೆಬ್‌ಸೈಟ್‌ನಲ್ಲಿ cbse.gov.in ನಲ್ಲಿ ಲಭ್ಯವಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, 10 ನೇ ತರಗತಿಯ ಸಿ.ಬಿ.ಎಸ್.ಇ ಬೋರ್ಡ್ ಪರೀಕ್ಷೆಗಳು 2023 ಫೆಬ್ರವರಿ 15, 2023 ರಿಂದ ಪ್ರಾರಂಭವಾಗುತ್ತವೆ ಮತ್ತು ಮಾರ್ಚ್ 21, 2023 ರಂದು ಮುಕ್ತಾಯಗೊಳ್ಳುತ್ತವೆ. ಹಾಗೆಯೇ, 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15, 2023 ಮತ್ತು […]
ಸಿ.ಬಿ.ಎಸ್.ಸಿ ಫಲಿತಾಂಶ: ಬೆಂಗಳೂರಿಗೆ ಎರಡನೇ ಸ್ಥಾನ, 100% ಫಲಿತಾಂಶ ದಾಖಲಿಸಿದ ಮಂಗಳಮುಖಿ ವಿದ್ಯಾರ್ಥಿಗಳು
ಬೆಂಗಳೂರು ಪ್ರದೇಶವು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿ.ಬಿ.ಎಸ್.ಸಿ) XII ತರಗತಿಯ ಫಲಿತಾಂಶಗಳಲ್ಲಿ 98.16% ರಷ್ಟು ಪ್ರಾದೇಶಿಕವಾರು ಉತ್ತೀರ್ಣತೆಯೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಸಿ.ಬಿ.ಎಸ್.ಸಿ ಬೋರ್ಡ್ ಶುಕ್ರವಾರ 12 ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದ್ದು ಒಟ್ಟಾರೆ ಶೇಕಡಾ 92.71 ತೇರ್ಗಡೆ ಫಲಿತಾಂಶ ಬಂದಿದೆ. ತಿರುವನಂತಪುರ ಪ್ರದೇಶವು 98.83% ಫಲಿತಾಂಶದೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 97.79% ಫಲಿತಾಂಶದೊಂದಿಗೆ ಬೆಂಗಳೂರು ಪ್ರದೇಶವು ಎರಡನೇ ಸ್ಥಾನದಲ್ಲಿದ್ದರೆ, ಚೆನ್ನೈ ಪ್ರದೇಶವು ಮೂರನೇ ಸ್ಥಾನದಲ್ಲಿದೆ. ಶೇ.94.54ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದರೆ, ಶೇ.91.25ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. […]
ಕಳೆದ ಎಂಟು ವರ್ಷಗಳಿಂದ ಟ್ರಿನಿಟಿ ಸೆಂಟ್ರಲ್ ಶಾಲೆಯಲ್ಲಿ ಶೇ. 100 ಫಲಿತಾಂಶ ಸಾಧನೆ
ಪೆರಂಪಳ್ಳಿ: ಟ್ರಿನಿಟಿ ಸೆಂಟ್ರಲ್ ಶಾಲೆಯು ಐ.ಸಿ.ಎಸ್.ಸಿ ಸ್ಟ್ರೀಮ್ ನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸತತ 8 ವರ್ಷಗಳಿಂದ ಶೇ. 100 ಫಲಿತಾಂಶವನ್ನು ದಾಖಲಿಸಿಕೊಂಡು ಬಂದಿದೆ. 2021-22 ನೇ ಸಾಲಿನಲ್ಲಿ 50 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 24 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಕುಮಾರಿ ರಾನಿಯಾ ಡಿ’ಸೋಜಾ 98.5 ಅಂಕಗಳಿಸಿ ಪ್ರಥಮ ಸ್ಥಾನವನ್ನು, ಕುಮಾರಿ ಡ್ಯಾಗ್ನಿ ಕ್ಯಾರಲ್ ನೊರೋನ್ಹಾ ಎರಡನೇ ಸ್ಥಾನವನ್ನು, ಹರ್ಷ ಯು ಪೂಜಾರಿ ಹಾಗೂ ಕನ್ನಿಕ ಮೂರನೇ ಸ್ಥಾನವನ್ನು ಹಂಚಿಕೊಂಡಿರುತ್ತಾರೆ. 11ವಿದ್ಯಾರ್ಥಿಗಳು […]