ಒಡಿಶಾ ತ್ರಿವಳಿ ರೈಲು ದುರಂತ: ಸಿಬಿಐ ವಿಚಾರಣೆ ಬಳಿಕ ಕುಟುಂಬ ಸಮೇತ ನಾಪತ್ತೆಯಾದ ಸಿಗ್ನಲ್ ಜೂನಿಯರ್ ಎಂಜಿನಿಯರ್

ಭುವನೇಶ್ವರ: 289 ಮಂದಿ ಪ್ರಾಣ ಕಳೆದುಕೊಂಡ ಒಡಿಶಾ ತ್ರಿವಳಿ ರೈಲು ದುರಂತದ ತನಿಖೆಯನ್ನು ಮುಂದುವರೆಸಿರುವ ಸಿಬಿಐ, ಸೊರೊ ಸೆಕ್ಷನ್ ಸಿಗ್ನಲ್ ಜೂನಿಯರ್ ಇಂಜಿನಿಯರ್ (ಜೆಇ) ಬಾಡಿಗೆ ಮನೆಯನ್ನು ಸೋಮವಾರ ಸೀಲ್ ಮಾಡಿದೆ. ಇಂಡೋ-ಏಷ್ಯನ್ ನ್ಯೂಸ್ ಸರ್ವಿಸ್ ವರದಿ ಪ್ರಕಾರ, ಅಮೀರ್ ಖಾನ್ ಎಂಬ ಜೆಇಯನ್ನು ಆರಂಭದಲ್ಲಿ ಸಿಬಿಐ ಅಜ್ಞಾತ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಿದೆ. ಏಜೆನ್ಸಿ ಅಧಿಕಾರಿಗಳು ಸೋಮವಾರ ಸೊರೊದಲ್ಲಿರುವ ಖಾನ್ ವಾಸವಾಗಿದ್ದ ಬಾಡಿಗೆ ಮನೆಗೆ ತಲುಪಿದಾಗ ಮನೆಗೆ ಬೀಗ ಹಾಕಲ್ಪಟ್ಟಿದೆ ಮತ್ತು ಆತನ ಇಡೀ ಕುಟುಂಬ ನಾಪತ್ತೆಯಾಗಿದೆ. […]

ಸಿಬಿಐ ಮುಂದಿನ ನಿರ್ದೇಶಕರಾಗಿ ಕರ್ನಾಟಕ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಆಯ್ಕೆ

ನವದೆಹಲಿ: ಕೇಂದ್ರೀಯ ತನಿಖಾ ದಳದ (ಸಿಬಿಐ) ಮುಂದಿನ ನಿರ್ದೇಶಕರಾಗಿ ಕರ್ನಾಟಕ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರನ್ನು ಆಯ್ಕೆ ಮಾಡಲಾಗಿದೆ. ಹಾಲಿ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಅವರ ಅಧಿಕಾರಾವಧಿಯು ಮೇ 25 ರಂದು ಕೊನೆಗೊಳ್ಳಲಿದೆ. ಸೂದ್ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರು ಮಾರ್ಚ್‌ನಲ್ಲಿ ಆರೋಪಗಳನ್ನು ಮಾಡಿದ್ದರು. ಶಿವಕುಮಾರ್ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯದ ಪೊಲೀಸ್ ಮಹಾನಿರ್ದೇಶಕರನ್ನು ಬಂಧಿಸುವಂತೆ […]

ತನಿಖಾ ಸಂಸ್ಥೆಗಳಿಂದ ಬಂಧನದ ಅಧಿಕಾರ ದುರುಪಯೋಗದ ವಿರುದ್ಧ ಮಾರ್ಗಸೂಚಿ: ವಿರೋಧ ಪಕ್ಷಗಳ ಮನವಿ ಪರಿಗಣಿಸಲು ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ಪ್ರತಿಪಕ್ಷ ನಾಯಕರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ)ಯಂತಹ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ‘ನಿರಂಕುಶವಾಗಿ ಬಳಸಲಾಗುತ್ತಿದೆ’ ಎನ್ನುವ ಆರೋಪ ಕೇಳಿಬರುತ್ತಿದ್ದು, ಸಿಬಿಐ ಮತ್ತು ಇಡಿ ಬಂಧನ ಅಧಿಕಾರದ ದುರುಪಯೋಗದ ವಿರುದ್ಧ ಮಾರ್ಗಸೂಚಿಗಳನ್ನು ಕೋರಿ 14 ವಿರೋಧ ಪಕ್ಷದ ರಾಜಕೀಯ ಪಕ್ಷಗಳು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.  ಬಂಧನ, ವಿಚಾರಣೆ ಮತ್ತು ಜಾಮೀನನ್ನು ನಿಯಂತ್ರಿಸುವ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಯಸಿ ಕಾಂಗ್ರೆಸ್ ನೇತೃತ್ವದಲ್ಲಿ 14 ವಿರೋಧ ಪಕ್ಷಗಳು ಸಲ್ಲಿಸಿದ್ದ […]

ಭ್ರಷ್ಟರು ಎಷ್ಟೇ ಪ್ರಭಾವಿಗಳಾಗಿದ್ದರೂ ಬಿಡಬೇಡಿ ಸದೆಬಡಿಯಿರಿ: ಪ್ರಧಾನಿ ಮೋದಿ

ನವದೆಹಲಿ: ಕೇಂದ್ರೀಯ ತನಿಖಾ ದಳದ ವಜ್ರ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯಕ್ಕೆ ಭ್ರಷ್ಟಾಚಾರ ಅತಿ ದೊಡ್ಡ ತಡೆಗೋಡೆಯಾಗಿದ್ದು, ಭ್ರಷ್ಟರು ಎಷ್ಟೇ ಪ್ರಭಾವಿಗಳಾಗಿದ್ದರೂ ಸುಮ್ಮನೆ ಬಿಡಬೇಡಿ ಸದೆಬಡಿಯಿರಿ ಎಂದು ಹೇಳಿದರು. ಭ್ರಷ್ಟರ ಅಧಿಕಾರ ಹಾಗೂ ಅವರ ವಾತಾವರಣಗಳನ್ನು ಕಂಡು ತನಿಖಾ ಸಂಸ್ಥೆಗಳು ಹಿಂಜರಿಯಬೇಕಾಗಿಲ್ಲ. ಭ್ರಷ್ಟಾಚಾರ ನಡೆಸುವ ವ್ಯಕ್ತಿಯನ್ನು ಸುಮ್ಮನೆ ಬಿಡಬಾರದು ಎನ್ನುವುದು ದೇಶದ ಜನರ ಹೆಬ್ಬಯಕೆ ಕೂಡ ಹೌದು. ನಿಮ್ಮ ಪ್ರಯತ್ನದಲ್ಲಿ ಯಾವುದೇ ಕೊರತೆ ಇರಬಾರದು. ಯಾವುದೇ ಭ್ರಷ್ಟಾಚಾರಿಯನ್ನು ಸುಮ್ಮನೆ […]