ವರಾಹರೂಪಂ ಹಾಡನ್ನು ಸುಶ್ರಾವ್ಯವಾಗಿ ಹಾಡಿದ ಜರ್ಮನಿಯ ನೇತ್ರಹೀನ ಕುವರಿ ಕ್ಯಾಸ್ಮೇ
ಕ್ಯಾಸ್ಮೇ ಎನ್ನುವ ವಿದೇಶೀ ಹುಡುಗಿಯೊಬ್ಬರು ಕಾಂತಾರದ ವರಾಹರೂಪಂ ಹಾಡನ್ನು ಹಾಡುವ ಮೂಲಕ ನೆಟ್ಟಿಗರ ಅಚ್ಚರಿಗೆ ಕಾರಣರಾಗಿದ್ದಾರೆ. “ನಿಮ್ಮಲ್ಲಿ ಹಲವರು ನಾನು ಕನ್ನಡದಲ್ಲಿ ಹಾಡಬೇಕೆಂದು ಬಯಸಿದ್ದರು, ಈ ಬಾರಿ ನಾನು ಸಾಹಿತ್ಯವನ್ನು ಸರಿಯಾಗಿ ಹೇಳಿದ್ದೇನೆ ಎಂದು ಭಾವಿಸುತ್ತೇನೆ” ಎಂದು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಹೇಳಿಕೊಂಡಿರುವ ಇವರು ವರಾಹರೂಪಂ ಹಾಡನ್ನು ಹಾಡಿದ್ದಾರೆ. https://www.instagram.com/reel/Ck0sRJ9MAad/?igshid=YmMyMTA2M2Y%3D 19 ವರ್ಷದ ನೇತ್ರಹೀನ ಹಾಡುಗಾರ್ತಿ ಮೂಲತಃ ಜರ್ಮನಿಯವರು. ಕ್ಯಾಸ್ಮೇ ಭಾರತವನ್ನು ಪ್ರೀತಿಸುತ್ತಾರೆ ಮತ್ತು ಭಾರತೀಯ ಭಾಷೆಗಳ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಇವರ ಇನ್ಸ್ಟಾಗ್ರಾಂ ಪ್ರೊಫೈಲ್ […]