ಮಸಾಲೆಗಳ ರಾಣಿ ಬಹುಪಯೋಗೀ ಏಲಕ್ಕಿಯ ಆರೋಗ್ಯಕಾರಿ ಪ್ರಯೋಜನಗಳು
ಮಸಾಲೆಗಳ ರಾಣಿ ಎಂದೂ ಕರೆಯಲ್ಪಡುವ ಏಲಕ್ಕಿಯನ್ನು ಭಾರತೀಯ ಸಾಂಪ್ರದಾಯಿಕ ಔಷಧ ಅಥವಾ ಆಯುರ್ವೇದದಲ್ಲಿ ಶತಮಾನಗಳಿಂದಲೂ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ. ಏಲಕ್ಕಿ ಅಥವಾ ಎಲೈಚಿ ಬಹುಪಯೋಗಿ ಮಸಾಲೆಯಾಗಿದ್ದು, ಇದನ್ನು ಬಿರಿಯಾನಿ, ಪುಲಾವ್, ಚಹಾ ಮತ್ತು ಹಲವಾರು ತಿಂಡಿ ತಿನಿಸುಗಳಲ್ಲಿ ಬಳಸುವುದು ಕೇವಲ ಸುವಾಸನೆಗೆ ಮಾತ್ರವಲ್ಲ, ಬದಲಿಗೆ ಇದರಲ್ಲಿರುವ ಆರೋಗ್ಯಭರಿತ ಅಂಶಗಳಿಗಾಗಿಯೂ ಹೌದು. ಏಲಕ್ಕಿಯು ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು, ವಿಟಮಿನ್‌ಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಅಜೀರ್ಣದ ಸಮಸ್ಯೆಗಳನ್ನು ನಿವಾರಿಸುತ್ತದೆ ಏಲಕ್ಕಿ ಚಹಾವು ಅಜೀರ್ಣ, […]