ಮರವಂತೆ: ಚಲಿಸುತ್ತಿದ್ದ ಕಾರು ಸಮುದ್ರ ಪಾಲು; ಓರ್ವ ಮೃತ್ಯು, ಇನ್ನೋರ್ವ ನಾಪತ್ತೆ
ಮರವಂತೆ: ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ ಓರ್ವ ಮೃತಪಟ್ಟು, ಇನ್ನೋರ್ವ ನಾಪತ್ತೆಯಾಗಿರುವ ಘಟನೆ ಮರವಂತೆ ಬೀಚ್ ನ ರಾಷ್ಟ್ರೀಯ ಹೆದ್ದಾರಿ 66 ರ ಬಳಿ ನಿನ್ನೆ ಮಧ್ಯರಾತ್ರಿ ಸಂಭವಿಸಿದೆ. ಮೃತರನ್ನು ಬೀಜಾಡಿಯ ಗೋಳಿಬೆಟ್ಟು ನಿವಾಸಿ, ವಿಲಾಸ್ ಮಾರ್ಬಲ್ ನ ಮಾಲೀಕ ರಮೇಶ್ ಆಚಾರ್ ನೇರಂಬಳ್ಳಿಯವರ ಪುತ್ರ ವಿರಾಜ್ ಆಚಾರ್ಯ(28) ಎಂದು ಗುರುತಿಸಲಾಗಿದೆ. ಸಹೋದರ ಸಂಬಂಧಿಗಳಾದ ರೋಶನ್ ನಾಪತ್ತೆಯಾಗಿದ್ದು, ಸಂದೇಶ್, ಕಾರ್ತಿಕ್ ಅವರನ್ನು ರಕ್ಷಿಸಲಾಗಿದೆ. ರೋಶನ್ ಸಮುದ್ರದಲ್ಲಿ ಕೊಚ್ಚಿ […]