ಬಿಜೆಪಿ ಅಭ್ಯರ್ಥಿ ಬೃಜೇಶ್‌ಗೆ ದೇಣಿಗೆ ನೀಡಿದ ಮಹಿಳೆಯರು: ಗೆಲುವಿಗೆ ಹಾರೈಕೆ
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬೃಜೇಶ್ ಚೌಟ ಗುರುವಾರ ನಾಮಪತ್ರ ಸಲ್ಲಿಸಲಿದ್ದು, ನಗರದ ಕೆಲ ಮಹಿಳೆಯರು ಅವರಿಗೆ ದೇಣಿಗೆ ನೀಡಿ, ಬುಧವಾರ ಶುಭ ಹಾರೈಸಿದರು. ಹೂವಿನ ವ್ಯಾಪಾರಿ ಯಶೋದಾ ಪಂಪ್‌ವೆಲ್, ಮೀನು ಮಾರಾಟ ಮಾಡುವ ಲಲಿತಾ ಪುರುಷೋತ್ತಮ್, ಸ್ಟೇಟ್‌ಬ್ಯಾಂಕ್‌ನಲ್ಲಿ ಒಣಮೀನು ವ್ಯಾಪಾರ ಮಾಡುವ ಕಲಾವತಿ, ಅನಸೂಯ, ಪೂರ್ಣಿಮಾ, ಶಾಂಭವಿ, ಕಾರ್ಮಿಕರಾದ ರಾಧಾ, ಬೀದಿ ನಾಯಿಗಳಿಗೆ ಆಹಾರ ಹಾಕುವ ರಜನಿ ಶೆಟ್ಟಿ ಮುಂತಾದವರು ಪಕ್ಷದ ಚುನಾವಣಾ ಕಚೇರಿಯಲ್ಲಿ ಅಭ್ಯರ್ಥಿಗೆ ಆರತಿ ಬೆಳಗಿ, ತಿಲಕ ಇಟ್ಟು, […]
ಅಭಿವೃದ್ಧಿಗೆ ಮೊದಲ ಆದ್ಯತೆ: ಕ್ಯಾಪ್ಟನ್ ಬೃಜೇಶ್ ಚೌಟ
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಹಾಲಿ ಸಂಸದ ನಳಿನ್‌ಕುಮಾರ್ ಕಟೀಲ್ ಅವರನ್ನು ಕೈಬಿಟ್ಟ ಬಿಜೆಪಿ, ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಬೃಜೇಶ್ ಚೌಟ (42) ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು ಎಲ್ಲ ಕುತೂಹಲಗಳಿಗೆ ತೆರೆ ಬಿದ್ದಿದೆ. ಬಾಲ್ಯದಿಂದ ಆರ್‌ಎಸ್‌ಎಸ್ ನಂಟು ಹೊಂದಿರುವ ಚೌಟ, ನಂತರ ಭೂಸೇನೆಗೆ ಸೇರಿ, ಎಂಟನೇ ಗೋರ್ಖಾ ರೈಫಲ್ಸ್ 7ನೇ ಬೆಟಾಲಿಯನ್‌ನಲ್ಲಿ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ಕ್ಯಾಪ್ಟನ್ ಹುದ್ದೆಗೇರಿದ್ದರು. ಸ್ವಯಂ ನಿವೃತ್ತಿಯ ಬಳಿಕ ಮಂಗಳೂರಿಗೆ ಬಂದು ಸಂಘ ಪರಿವಾರದ […]