ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮೊದಲ ಅರ್ಧ- ಹೊಂದಾಣಿಕೆಯ ಅಸ್ಥಿಮಜ್ಜೆಯ ಕಸಿ
ಮಣಿಪಾಲ: ಅಕ್ಯೂಟ್ ಮೈಲೋಯ್ಡ್ ಲ್ಯುಕೇಮಿಯಾ (ಒಂದು ರೀತಿಯ ರಕ್ತದ ಕ್ಯಾನ್ಸರ್) ರೋಗ ಪತ್ತೆಯಾದ 12 ವರ್ಷದ ಬಾಲಕನಿಗೆ ಮೊದಲ ಅರ್ಧ- ಹೊಂದಾಣಿಕೆಯ ಅಸ್ಥಿಮಜ್ಜೆಯ ಕಸಿಯನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಅಸ್ಥಿ ಮಜ್ಜೆಯ ಕಸಿಯು ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿಗಳ ತಜ್ಞ ತಂಡದಿಂದ ಮಾಡಲ್ಪಡುವ ಒಂದು ಸಂಕೀರ್ಣ ವೈದ್ಯಕೀಯ ಚಿಕಿತ್ಸೆಯಾಗಿದ್ದು, ಇದು ಕ್ಯಾನ್ಸರ್ ಯುಕ್ತ ಅಸ್ಥಿ ಮಜ್ಜೆಯನ್ನು ನಿರ್ಮೂಲನೆ ಮಾಡಿ, ಆರೋಗ್ಯಕರ ಅಸ್ಥಿ ಮಜ್ಜೆಯ ಕೋಶಗಳನ್ನು ವರ್ಗಾಹಿಸುವ ಪ್ರಕ್ರಿಯೆಯಾಗಿದೆ. ರೋಗಿಗೆ ಅಸ್ಥಿ ಮಜ್ಜೆಯನ್ನು ದಾನ ಮಾಡಲು ಪೂರ್ಣ […]