ಮಾಜಿ ವಿಶ್ವಸುಂದರಿ ಸ್ಪರ್ಧಿ ಶೆರಿಕಾ ಡಿ ಅರ್ಮಾಸ್​ ಕ್ಯಾನ್ಸರ್​ ಜೊತೆ ಹೋರಾಡಿ 26ನೇ ವಯಸ್ಸಿಗೆ ನಿಧನ

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಶೆರಿಕಾ ಡಿ ಅರ್ಮಾಸ್​ ಕಿಮೋಥೆರಪಿ ಹಾಗೂ ರೇಡಿಯೋಥೆರಪಿ ಚಿಕಿತ್ಸೆಗಳಿಗೆ ಒಳಗಾಗಿದ್ದರು. ಶೆರಿಕಾ ಡಿ ಅರ್ಮಾಸ್​ ಅವರ ನಿಧನ ಉರುಗ್ವೆ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನೇಕರನ್ನು ದುಃಖಕ್ಕೀಡು ಮಾಡಿದೆ.ಶೆರಿಕ್​ ಅವರು ಎರಡು ವರ್ಷಗಳ ಕಾಲ ಗರ್ಭಕಂಠದ ಕ್ಯಾನ್ಸರ್​ ಜೊತೆ ಹೋರಾಡಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಶೆರಿಕಾ ಡಿ ಅರ್ಮಾಸ್​ ನಿಧನಕ್ಕೆ ಅನೇಕ ವಿಶ್ವಸುಂದರಿ ವಿಜೇತರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.2015ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಉರುಗ್ವೆಯನ್ನು ಪ್ರತಿನಿಧಿಸಿದ್ದ ಮಾಜಿ ವಿಶ್ವ ಸುಂದರಿ ಸ್ಪರ್ಧಿ ಶೆರಿಕಾ ಡಿ ಅರ್ಮಾಸ್​ […]