ಅಂದು ಕಂಡ ಕನಸಿಂದು ನನಸಾಗಿದೆ
ಅಂದು ನನ್ನ ಕನಸಿನ ದಿನಗಳಲ್ಲಿ ಮುಳುಗಿ ಹೋದ ಕ್ಷಣವನ್ನು ಮರೆಯಲು ಸಾಧ್ಯವೇ ಇಲ್ಲ. ಎಲ್ಲಾ ಹುಡುಗಿಯರ ಹಾಗೆಯೇ ನನ್ನ ಮನಸ್ಸಿನಲ್ಲಿಯು ಒಂದು ಆಸೆ ಮೊಳಕೆಯೊಡೆದಿತ್ತು. ನನ್ನ ಜೀವನದಲ್ಲಿ ಬರುವಂತಹ ಸಂಗಾತಿ, ನನ್ನ ಇಷ್ಟಪಡುವ ಜೀವ ಹೇಗಿರಬೇಕೆಂದು ಊಹಿಸಿಕೊಳ್ಳುವ, ಕನಸ್ಸುಗಳನ್ನು ಕಟ್ಟಿಕೊಳ್ಳುವ ಆ ವಯಸ್ಸು. ಹಾಗೆಯೇ ನಾನೂ ಸಹ ಒಂದು ಸುಂದರ ಕನಸನ್ನು ಕಟ್ಟಿದ್ದೆ. ಆ ದಿನಗಳಲ್ಲಿ ಎಷ್ಟು ಯೋಚಿಸಿದರು ಸಾಕಾಗುತ್ತಿರಲಿಲ್ಲ, ದಿನದ ಎಲ್ಲಾ ಕ್ಷಣಗಳನ್ನು ಯೋಚಿಸುವುದಕ್ಕೆ ಮೀಸಲಿಡುತ್ತಿದ್ದೆ. ನನಗೆ ತಿಳಿಯದೆ ನನ್ನಲ್ಲಿ ಬದಲಾವಣೆಯಾಗುತ್ತಿತ್ತು. ಶಾಲೆಗೆ ಹೋದರೂ, ಸ್ನೇಹಿತರ […]