ಸಿ.ಎ ಫೌಂಡೇಶನ್ ಪರೀಕ್ಷೆ: ಆಳ್ವಾಸ್ ಕಾಲೇಜಿಗೆ 69% ಫಲಿತಾಂಶ

ಮೂಡಬಿದ್ರೆ: ಸಿ.ಎ ಫೌಂಡೇಶನ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಕಾಲೇಜು ಅತ್ಯುತ್ತಮ ಫಲಿತಾಂಶ ದಾಖಲಿಸಿದೆ. 2023-24ಡಿಸೆಂಬರ್- ಜನವರಿಯಲ್ಲಿ ಪರೀಕ್ಷೆ ನಡೆದಿತ್ತು. ರಾಷ್ಟ್ರಮಟ್ಟದಲ್ಲಿ ಶೇಕಡ 29.99 ಫಲಿತಾಂಶ ದಾಖಲಾಗಿದ್ದರೆ, ಆಳ್ವಾಸ್ 69% ಫಲಿತಾಂಶ ಗಳಿಸಿದೆ. ಆಳ್ವಾಸ್ ಕಾಲೇಜಿನ 74 ವಿದ್ಯಾರ್ಥಿಗಳಲ್ಲಿ 51 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಶಿವಪ್ರಸಾದ್, ಕನ್ಯಾ ಪ್ರಭು, ಆಕಾಶ್ ಜೆ. ಭಟ್, ಹಿತೇಶ್ ಎಂ.ಎಸ್, ವೈಷ್ಣವಿ ಯು.ಕೆ., ನಿಧಿ ಆರ್.ಕೆ., ಅನಿಷಾ ಮತ್ತು ತಿಲಕ್ ರಾಜ್ ಒಟ್ಟು 400ರಲ್ಲಿ 250ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. […]

ತ್ರಿಶಾ ಕ್ಲಾಸಸ್ : ಸಿ.ಎ ಫೌಂಡೇಷನ್ ಸಾಧಕರಿಗೆ ಸನ್ಮಾನ, ಇಂಟರ್ ಮೀಡಿಯೆಟ್ ಪುನಶ್ಚೇತನ ಕಾರ್ಯಕ್ರಮ

ಉಡುಪಿ : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಟ್ಸ್ ಆಫ್ ಇಂಡಿಯಾ (ಐ.ಸಿ.ಎ.ಐ) ನಡೆಸಿರುವ ಸಿ.ಎ ಫೌಂಡೇಷನ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹಾಗೂ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಆಗಸ್ಟ್ 15 ರಂದು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಹೆತ್ತವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಹಾಗೂ ಸಿ.ಎ ಇಂಟರ್ ಮೀಡಿಯೆಟ್ ವಿದ್ಯಾರ್ಥಿಗಳಿಗೆ ಪುನಶ್ಚೇತನ (ಓರಿಯೆಂಟೇಷನ್) ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತ್ರಿಶಾ ಸಂಸ್ಥೆಯ ಅಧ್ಯಕ್ಷ ಸಿ.ಎ ಗೋಪಾಲಕೃಷ್ಣ ಭಟ್ ಸಿ.ಎ ಕೋರ್ಸ್ ನಲ್ಲಿ […]

ತ್ರಿಶಾ ಕ್ಲಾಸಸ್: ಸಿ.ಎ ಫೌಂಡೇಷನ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

ಉಡುಪಿ: ಸತತ ಇಪ್ಪತ್ತೈದು ವರ್ಷಗಳಿಂದ ಸಿ.ಎ, ಸಿ.ಎಸ್ ಮುಂತಾದ ವೃತ್ತಿಪರ ಕೋರ್ಸ್ಗಳಿಗೆ ತರಬೇತಿ ನೀಡುತ್ತಿರುವ ಸಂಸ್ಥೆ ತ್ರಿಶಾ ಕ್ಲಾಸಸ್ ಇದರ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿರುವ ಜೂನ್ 2023 ರ ಸಿ.ಎ ಫೌಂಡೇಷನ್ ಪರೀಕ್ಷೆಯಲ್ಲಿಉತ್ತಮ ಸಾಧನೆಯನ್ನು ಮಾಡಿದ್ದಾರೆ. ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯ ವಿದ್ಯಾರ್ಥಿಗಳಾದ ಮನಿಷ ಭಾಸ್ಕರ್ ಶೆಟ್ಟಿ (310), ವಿಶ್ರುತಾ (283) ,ಸಿರಿ ಎಸ್ಎನ್ (279), ಅನನ್ಯ ಎಎಸ್ (268), ದರ್ಶನ್ ಕೆ (268), ಆರ್ ಆರ್ ಸುಕೃತಿ(259), ಮೋಹಿತ್ […]

ಸಿಎ ಅರ್ಹತಾ ಪರೀಕ್ಷೆ: ಕ್ರಿಯೇಟಿವ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಕಾರ್ಕಳ: ಇನ್ಸ್ಟಿಟ್ಯೂಟ್‌ ಆಫ್‌ ಚಾರ್ಟೆರ್ಡ್‌ ಅಕೌಂಟೆಂಟ್‌ ಆಫ್‌ ಇಂಡಿಯಾ ಸಂಸ್ಥೆಯವರು ನಡೆಸಿದ ಸಿಎ (CA) ಮೊದಲ ಹಂತದ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸುದೀಪ್‌ ಕೆ, ಸುಮಾ, ಸುಚಿತಾ ಬಿ ಸಿ, ಅನಘಾ, ಬಿ ಸಿದ್ದಾರ್ಥ್‌ ಪೈ, ಹೆಗ್ಡೆ ಅನಿರುದ್ಧ್‌ ರಮೇಶ್‌, ಅಭಿಷೇಕ್‌ ಪಿ ಎಸ್‌, ವಿಂದ್ಯಾ ವಿನಯ್‌ ಹೆಗಡೆ, ಎಸ್‌ ಅನುರಾಜ್‌ ಇವರು ತೇರ್ಗಡೆ ಹೊಂದಿ ಸಿ ಎ ಇಂಟರ್‌ ಮೀಡಿಯೆಟ್‌ ಗೆ ಅರ್ಹತೆ ಗಳಿಸಿದ್ದಾರೆ. ಸುದೀಪ್‌ ಕೆ 261 ಅಂಕ, […]

ಸಿ.ಎ ಫೌಂಡೇಶನ್ ಪರೀಕ್ಷೆ: ವಿದ್ಯೋದಯ ಕಾಲೇಜಿನ ವಿದ್ಯಾರ್ಥಿನಿ ರಮ್ಯಾ ಆರ್. ಭಟ್ ಉತ್ತೀರ್ಣ

ಉಡುಪಿ: 2023 ಜೂನ್ ನಲ್ಲಿ ನಡೆದ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಉಡುಪಿ ವಿದ್ಯೋದಯ ಕಾಲೇಜಿನ ವಿದ್ಯಾರ್ಥಿನಿ ರಮ್ಯಾ ಆರ್. ಭಟ್ ಉತ್ತೀರ್ಣರಾಗಿದ್ದಾರೆ. ಇವರು ಮಣಿಪಾಲದ ಉದ್ಯಮಿ ರಾಜ್ಕುಮಾರ್ ಭಟ್ ಹಾಗೂ ಸೌಮ್ಯ ಭಟ್ ದಂಪತಿಯ ಪುತ್ರಿ.