ಸಿ.ಎ ಫೌಂಡೇಶನ್ ಪರೀಕ್ಷೆ: ಆಳ್ವಾಸ್ ಕಾಲೇಜಿಗೆ 69% ಫಲಿತಾಂಶ

ಮೂಡಬಿದ್ರೆ: ಸಿ.ಎ ಫೌಂಡೇಶನ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಕಾಲೇಜು ಅತ್ಯುತ್ತಮ ಫಲಿತಾಂಶ ದಾಖಲಿಸಿದೆ. 2023-24ಡಿಸೆಂಬರ್- ಜನವರಿಯಲ್ಲಿ ಪರೀಕ್ಷೆ ನಡೆದಿತ್ತು.

ರಾಷ್ಟ್ರಮಟ್ಟದಲ್ಲಿ ಶೇಕಡ 29.99 ಫಲಿತಾಂಶ ದಾಖಲಾಗಿದ್ದರೆ, ಆಳ್ವಾಸ್ 69% ಫಲಿತಾಂಶ ಗಳಿಸಿದೆ. ಆಳ್ವಾಸ್ ಕಾಲೇಜಿನ 74 ವಿದ್ಯಾರ್ಥಿಗಳಲ್ಲಿ 51 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ವಿದ್ಯಾರ್ಥಿಗಳಾದ ಶಿವಪ್ರಸಾದ್, ಕನ್ಯಾ ಪ್ರಭು, ಆಕಾಶ್ ಜೆ. ಭಟ್, ಹಿತೇಶ್ ಎಂ.ಎಸ್, ವೈಷ್ಣವಿ ಯು.ಕೆ., ನಿಧಿ ಆರ್.ಕೆ., ಅನಿಷಾ ಮತ್ತು ತಿಲಕ್ ರಾಜ್ ಒಟ್ಟು 400ರಲ್ಲಿ 250ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ.

ಶ್ರೆಜಾ ಎಸ್., ಜ್ಞಾನೇಶ್ ಆರ್., ಐಶ್ವರ್ಯ, ಫಾಹಿಮ್, ಆದಿಶಾ, ಡಿಯೋನಾ ವಾಸ್, ಸಾಕ್ಷಿ ಹೆಗ್ಡೆ, ಸುಮೇಧ್, ರಕ್ಷಿತಾ ಜಿ, ಅಮೃತಾ, ಲಲಿತಾ, ಸನ್ನಿಧಿ ಎಸ್., ವೈಷ್ಣವಿ ಎ.ಎಂ, ಅನ್ವಿತಾ, ವೃಂದಾ ವಿ.ವಿ., ವರ್ಷಾ, ದೀಕ್ಷಾ ಎಸ್., ಸಂಜನಾ ಎಸ್.ವಿ., ಹರ್ಷಿತಾ ಎಸ್., ಸುಜ್ಞಾನ್, ಲೆನಿಷಾ, ಗಗನ್‌ದೀಪ್, ಸ್ವಾತಿ, ಸಾವಿತ್ರಿ ಹೆಗ್ಡೆ, ಇಸ್ಮಾಯಿಲ್ ಅರ್ಫಾನ್, ಅಪೂರ್ವ ಎಸ್.ಎಚ್, ಚೇತಲಿ, ಚಿರಂತ್ ಕೆ, ಅಭಿಷೇಕ್ ವೈ.ಕೆ, ಕವನಾ, ಗುಣಶ್ರೀ, ಕವನಾ ಎಂ.ಎಚ್., ಸುದೀಪ್ ವಿ., ಯಶಸ್ ಐ.ಜೆ., ನಿವೇಧಾ ಡಿ., ಪ್ರೇಕ್ಷಾ ಆರ್. ಭಟ್, ಶ್ರೀನಿಧಿ, ಪ್ರಭಾಂಜನ್, ಅಕ್ಷಯ್, ನೀರಜ್ ಆರ್.ಎಚ್, ತನುಶ್ರೀ, ವೈಷ್ಣವಿ ಎಸ್.ಎನ್ ಮತ್ತು ಸುಧೀಕ್ಷಾ ತೇರ್ಗಡೆ ಹೊಂದಿದ್ದಾರೆ.

20 ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್, ಸಂಯೋಜಕ ಅನಂತಶಯನ, ಪದವಿ ಪೂರ್ವ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ ಎಂ. ಡಿ. ಅಭಿನಂದಿಸಿದ್ದಾರೆ.