ಸಿಎ ಫೌಂಡೇಷನ್ ಪರೀಕ್ಷೆ: ದೀಕ್ಷಾ ಎಂ. ಉತ್ತೀರ್ಣ
ಉಡುಪಿ: ಹೊಸದಿಲ್ಲಿಯ ಲೆಕ್ಕ ಪರಿಶೋಧಕರ ಸಂಸ್ಥೆ (ICAI) ಡಿಸೆಂಬರ್ 2022ರಲ್ಲಿ ನಡೆದ ಸಿಎ ಫೌಂಡೇಷನ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ದೀಕ್ಷಾ ಎಂ. 332 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಇವರು ಸಿಎ ಫೌಂಡೇಷನ್ ತರಬೇತಿಯನ್ನು ಉಡುಪಿಯ ತ್ರಿಶಾ ಕ್ಲಾಸಸ್‍ನಲ್ಲಿ ಹಾಗೂ ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ ಆಂಡ್ ಮ್ಯಾನೇಜಮೆಂಟ್‍ನಲ್ಲಿ ಬಿ.ಕಾಂ ಪದವಿಯ ವ್ಯಾಸಂಗವನ್ನು ನಡೆಸುತ್ತಿದ್ದಾರೆ. ಇವರು ಕಟಪಾಡಿಯ ಮಂಜುನಾಥ ಹೊಳ್ಳ ಮತ್ತು ವಿಜಯಲಕ್ಷ್ಮೀ ದಂಪತಿಯ ಪುತ್ರಿಯಾಗಿರುತ್ತಾರೆ.