ಬೈಂದೂರು: ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
ಬೈಂದೂರು: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೋರ್ವ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಸೊನಗಾರಹಿತ್ಲು ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಯಡ್ತರೆ ಗ್ರಾಮದ ಸೊನಗಾರಹಿತ್ಲು ನಿವಾಸಿ 34 ವರ್ಷದ ಮಣಿಕಂಠ ಆತ್ಮಹತ್ಯೆಮಾಡಿಕೊಂಡ ಯುವಕ. ಇವರು ಬೆಳಗಾವಿಯಲ್ಲಿ ಹೋಟೆಲ್ ಕೆಲಸ ಮಾಡುತ್ತಿದ್ದು, ವರ್ಷದಲ್ಲಿ ಎರಡ್ಮೂರು ಬಾರಿ ಮನೆಗೆ ಬರುತ್ತಿದ್ದರು. ಮೂರು ದಿನಗಳ ಹಿಂದೆ ಊರಿಗೆ ಬಂದಿದ್ದು, ಮನೆಗೆ ಬಂದಿರಲಿಲ್ಲ. ಫೆ.8ರಂದು ಮಧ್ಯಾಹ್ನ 2:30ರ ಸುಮಾರಿಗೆ ಯಡ್ತರೆ ಗ್ರಾಮದ ಸೊನಗಾರಹಿತ್ಲು ಎಂಬಲ್ಲಿ ಹೊಸದಾಗಿ ಕಟ್ಟುತ್ತಿರುವ ಮನೆಯ […]