ಬೈಂದೂರು: ಬಾವಿಗೆ ಬಿದ್ದು ಮಹಿಳೆ ಮೃತ್ಯು

ಬೈಂದೂರು: ನೀರು ತೆಗೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಬಾವಿಯೊಳಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೈಂದೂರು ತಗ್ಗರ್ಸೆ ಗ್ರಾಮದ ಕಂಠದ ಮನೆ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ. ತಗ್ಗರ್ಸೆ ಗ್ರಾಮದ ಕಂಠದ ಮನೆ ನಿವಾಸಿ ಅನಿತಾ ಶೆಟ್ಟಿ (55) ಮೃತ ದುರ್ದೈವಿ. ಈಕೆ ಗಂಡ ಹಾಗೂ ಮಗಳೊಂದಿಗೆ ಕಂಠದ ಮನೆಯಲ್ಲಿ ವಾಸವಾಗಿದ್ದರು‌. ಇಂದು ಬೆಳಿಗ್ಗೆ 6 ಗಂಟೆಗೆ ಸುಮಾರಿಗೆ ನೀರು ತರಲು ಹೋದವರು ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ […]