ಬೈಂದೂರು: ಅಡಕೆ ಕಳ್ಳರ ಬಂಧನ; 2 ಲಕ್ಷ ಮೌಲ್ಯದ ಅಡಕೆ ವಶ

ಬೈಂದೂರು: ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಬೈಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬೈಂದೂರು ಠಾಣಾ ವ್ಯಾಪ್ತಿಯ ನಾವುಂದ ಗ್ರಾಮದ ಕೋಡಿಯಾಡಿ ಫಾರ್ಮ್ ಹೌಸ್ ಅಂಗಳದಲ್ಲಿ ಒಣಗಿಸಿದ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿದ್ದ ಆರೋಪಿಗಳನ್ನು ಬೈಂದೂರು ಪಿಎಸ್ಐ ಮತ್ತು ತಂಡ ಬಂಧಿಸಿದ್ದು, ಆರೋಪಿಗಳಿಂದ 2,00,000/-ಮೌಲ್ಯದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಮಾದಕ ವಸ್ತು ಸೇವನೆ ಪ್ರಕರಣ: ಶಂಕಿತ ವ್ಯಕ್ತಿ ಪೋಲೀಸ್ ವಶಕ್ಕೆ

ಬೈಂದೂರು: ಬೈಂದೂರು ಠಾಣಾ ವ್ಯಾಪ್ತಿಯ ಶಿರೂರು ಗ್ರಾಮದ ಶಿರೂರು ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇವನೆ ಮಾಡಿಕೊಂಡು ಅಮಲಿನಲ್ಲಿದ್ದ ತಾಲೂಕಿನ ಮಹಮ್ಮದ್ ಶರೀಫ್ (25) ಎಂಬಾತನನ್ನು ಸೆ.8 ರಂದು ಸಂಜೆ 4:30 ಕ್ಕೆ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಎ ಕಾಯ್ಕಿಣಿ ಮತ್ತು ಸಿಬ್ಬಂದಿಗಳು  ವಶಕ್ಕೆ ಪಡೆದುಕೊಂಡಿದ್ದು, ಸದ್ರಿ ವ್ಯಕ್ತಿಯು ನಿಷೇಧಿತ ಮಾದಕ ವಸ್ತುಗಳನ್ನು ಸೇವಿಸಿರುವ ಸಂಶಯವಿದ್ದ ಕಾರಣ ಆತನನ್ನು ಕಛೇರಿಗೆ ಕರೆತಂದು ಹೆಚ್ಚಿನ ವೈದ್ಯಕೀಯ ತಪಾಸಣೆಗಾಗಿ ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯ ವೈದ್ಯಾಧಿಕಾರಿಯವರವರ ಮುಂದೆ […]