ಈ ಸಂಕ ಮುರಿದು ಬಿದ್ದರೆ ಮುಗೀತು ಜನರ ಕತೆ: ಕುಬ್ಜಾ ನದಿ ಸಂಕದ “ಸಂಕಟ” ಕೇಳೋರಿಲ್ಲ
-ಶ್ರೀಕಾಂತ್ ಹೆಮ್ಮಾಡಿ, ಕುಂದಾಪುರ ಬೈಂದೂರು: ಈ ಕಾಲುಸಂಕದ ಮೇಲೆ ಒಬ್ಬೊಬ್ಬರಾಗಿಯೇ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಸಾಗಬೇಕು. ಎಲ್ಲರೂ ಒಮ್ಮೆಲೆ ಕಾಲುಸಂಕ ದಾಟಿದರೆ ನದಿಯ ಪಾಲಾಗೋದು ಪಕ್ಕಾ. ಊರ ಜನರೇ ಶ್ರಮದಾನದ ಮೂಲಕ ನಿರ್ಮಿಸಿಕೊಂಡ ಕಾಲುಸಂಕ ದಾಟುವುದಿದೆಯಲ್ಲಾ ಅದಕ್ಕೆ ಎಂಟೆದೆ ಬೇಕು. ಕಾಲುಸಂಕದ ಮಟ್ಟ ತಾಗಿ ಕೆಂಬಣ್ಣದಲ್ಲಿ ಕುಬ್ಜೆ ಹರಿಯುವ ರಭಸ ನೋಡಿದರೆ ಎದೆ ಝಲ್ ಅನ್ನುತ್ತೆ. ಪ್ರಾಣದ ಹಂಗು ತೊರೆದು ತುಂಬಿ ಹರಿಯುವ ನದಿ ದಾಟುವ ಆ ಊರಿನ ಜನರ ಗುಂಡಿಗೆ ಮೆಚ್ಚಲೇಬೇಕು. ಮುರಿದು ಬೀಳುವ […]