ಬಿಸಿಲಿನ ಧಗೆಯಿಂದ ತನುವನ್ನು ತಂಪಾಗಿಸಿಕೊಳ್ಳಲು ನೈಸರ್ಗಿಕ ಆರೋಗ್ಯಕರ ಪೇಯಗಳನ್ನು ಸೇವಿಸಿರಿ

ಕರಾವಳಿಯ ಭಾಗದಲ್ಲಿ ಬಿಸಿಲು ಧಗಧಗಿಸುತ್ತಿದ್ದು, ಮಂಗಳೂರಿನಲ್ಲಿ 39ಡಿಗ್ರಿ ಸೆಲ್ಸಿಯಸ್ ನ ಅತ್ಯಾಧಿಕ ತಾಪಮಾನ ದಾಖಲಾಗಿದೆ. ಬಿಸಿಲಿನ ತಾಪಾಘಾತದಿಂದ ಜನರು ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳು ಕೂಡಾ ಪ್ರಾಣಕಳೆದುಕೊಳ್ಳುವ ಘಟನೆಗಳು ಭಾರತದಲ್ಲಿ ಸರ್ವೇ ಸಾಮಾನ್ಯ. ಬೇಸಿಗೆ ಕಾಲದಲ್ಲಿ ದೇಹವು ಅತಿ ಹೆಚ್ಚು ನೀರನ್ನು ಕಳೆದುಕೊಳ್ಳುವುದರಿಂದ ಈ ಸಮಯದಲ್ಲಿ ನೀರಿನ ಸೇವನೆಯನ್ನು ಹೆಚ್ಚಿಸುವುದು ಅವಶ್ಯ. ಬರಿಯ ನೀರು ಕುಡಿಯುವ ಬದಲಿಗೆ ಕೆಲವೊಂದು ಆರೋಗ್ಯ ಪೇಯಗಳನ್ನು ಆಹಾರದ ಜೊತೆ ಸೇವಿಸಿದಲ್ಲಿ ತನುವನ್ನು ತಂಪಾಗಿಸುವ ಜೊತೆ ಮನಸ್ಸನ್ನೂ ಉಲ್ಲಾಸಭರಿತವಾಗಿಸಿಕೊಳ್ಳಬಹುದು. ನೀರು ಮಜ್ಜಿಗೆ: ಮಜ್ಜಿಗೆಯ ನಿಯಮಿತ […]