ಮೊದಲ ದಿನ ೫. ೭೧ ಲಕ್ಷ ಎರಡನೇ ದಿನ 41.34 ಲಕ್ಷ ಮಹಿಳಾ ಪ್ರಯಾಣಿಕರಿಂದ ಉಚಿತ ಪ್ರಯಾಣ
ಬೆಂಗಳೂರು: ಪಂಚ ಗ್ಯಾರಂಟಿಗಳಲ್ಲಿ ಮೊದಲನೇಯದಾಗಿ ಶಕ್ತಿ ಯೋಜನೆಗೆ ಭಾನುವಾರ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಕಾಂಗ್ರೆಸ್ ಘೋಷಿಸಿದ ಗೊಂದಲ ರಹಿತ ಮೊದಲ ಗ್ಯಾರಂಟಿ ಯೋಜನೆ ಎರಡನೇ ದಿನವೂ ಯಶಸ್ವಿ ಲಕ್ಷಣಗಳನ್ನು ತೋರಿದೆ. ಉಚಿತ ಪ್ರಯಾಣವನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳುತ್ತಿದ್ದು, ಬಸ್ನಲ್ಲಿ ಭರ್ಜರಿ ತಿರುಗಾಟ ನಡೆಸಿದ್ದಾರೆ. ಈ ಯೋಜನೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಎರಡನೇ ದಿನವಾದ ಸೋಮವಾರವೂ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಭಾನುವಾರ ವಿಧಾನಸೌಧದಲ್ಲಿ ಚಾಲನೆ ಸಿಕ್ಕ ಶಕ್ತಿ ಗ್ಯಾರಂಟಿ ಯೋಜನೆಯನ್ನು ರಾಜ್ಯದ ಮಹಿಳೆಯರು […]