ಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉದ್ಘಾಟನೆ: ಬಂಟ ಸಮುದಾಯ ಪ್ರಾಮಾಣಿಕತೆ, ದಕ್ಷತೆ, ವಿಶ್ವಾಸಾರ್ಹತೆ, ಕ್ರಿಯಾಶೀಲತೆಯ ಪ್ರತೀಕ: ಕೇಮಾರು ಶ್ರೀ
ಕಾರ್ಕಳ: ಪ್ರಮಾಣಿಕತೆ, ದಕ್ಷತೆ, ವಿಶ್ವಾರ್ಹತೆ, ಕ್ರಿಯಾಶೀಲತೆ ಹೊಂದಿದ್ದ ಬಂಟ ಸಮುದಾಯವು ನಾಡಿನ ಸಂಸ್ಕೃತಿ ಇದ್ದಂತೆ. ಸಂಸ್ಕೃತಿ ಯಿಂದಾಗಿ ಸಮಾಜದಲ್ಲಿ ಉತ್ಸವಗಳು ಮೂಡಿ ಬರುತ್ತವೆ ಹಾಗೂ ಸಮಾಜದಲ್ಲಿ ಎಲ್ಲರು ಒಗ್ಗಟ್ಟಾಗಿಸಲು ಸಾಧ್ಯವೆಂದು ಕೇಮಾರು ಈಶ ವಿಠಲದಾಸ ಸ್ವಾಮೀಜಿ ನುಡಿದರು. ಕುಕ್ಕುಂದೂರು ಜೋಡುರಸ್ತೆಯ ಪ್ರೈಮ್ ಮಾಲ್‌ನ ಒಂದನೇಯ ಮಹಡಿಯಲ್ಲಿ ಪ್ರಾರಂಭಿಸಲಾದ ಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ದೀಪ ಪ್ರಜ್ವಲಿಸಿದ ಬಳಿಕ ಉಷಾ ಸೆಲೆಬ್ರೇಶನ್ ಹಾಲ್‌ನಲ್ಲಿ ಜರುಗಿದ್ದ ಸಮಾರಂಭದಲ್ಲಿ ಆಶೀರ್ವಾಚನ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಉದಯ ಶೆಟ್ಟಿ […]