ವಿಶ್ರಾಂತಿ ಪಡೆಯಲು ಸಮಯವಿಲ್ಲ, 2024 ಕ್ಕೆ ಸಿದ್ಧರಾಗಿ: ಯೋಗಿ ಸಂಪುಟ ಭೇಟಿಯಾದ ಪ್ರಧಾನಿಯಿಂದ ‘ಬುಲ್ಡೋಜರ್ ಅಭಿಯಾನಕ್ಕೆ’ ಶ್ಲಾಘನೆ
ಉತ್ತರ ಪ್ರದೇಶ: ಸೋಮವಾರ ಸಂಜೆ ಲಕ್ನೋನಲ್ಲಿ ಯೋಗಿ ಆದಿತ್ಯನಾಥ್ ಸಂಪುಟದೊಂದಿಗೆ ಚಿಂತನ-ಮಂಥನ ಸಭೆ ನಡೆಸಿದ ಪ್ರಧಾನಿ ಮೋದಿ, ಉತ್ತಮ ಆಡಳಿತದಿಂದ ಮಾತ್ರ ಅಧಿಕಾರದ ಹಾದಿ ಸುಗಮವಾಗುತ್ತದೆ ಎಂದು ಕಿವಿಮಾತು ಹೇಳಿದ್ದಾರೆ. ಯೋಗಿ ಸಂಪುಟದ ಸಚಿವರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲಾ ಸಚಿವರು ಸಾರ್ವಜನಿಕರ ಸೇವೆಗೆ ಮುಡುಪಾಗಿರಬೇಕು. ವಿಶ್ರಾಂತಿಗೆ ಸಮಯ ಉಳಿದಿಲ್ಲ, 2024 ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಎಲ್ಲರೂ ಸಿದ್ಧತೆಗಳನ್ನು ಪ್ರಾರಂಭಿಸಬೇಕು ಎಂದಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ. ಅಪರಾಧಿಗಳ ವಿರುದ್ಧ ಯೋಗಿ ಆದಿತ್ಯನಾಥ್ ಸರ್ಕಾರದ […]