ಕೆಲವೇ ದಿನಗಳಲ್ಲಿ ಮೀನುಗಾರರ ಸಾಲ ಮನ್ನಾ ಆದೇಶ ಪತ್ರ : ಬಿ.ಎಸ್.ಯಡಿಯೂರಪ್ಪ
ಕುಂದಾಪುರ : ೬೦ ಕೋಟಿ ರೂಪಾಯಿ ಮೀನುಗಾರರ ಸಾಲ ಮನ್ನಾ ಮಾಡಲಾಗಿದ್ದು, ಸರ್ಕಾರದ ಆದೇಶ ಬರಲಿಲ್ಲ ಎನ್ನುವ ಗೊಂದಲ ಜನರಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ೫೫ ಕೋಟಿ ರೂಪಾಯಿ ೨೦,೧೯೭ ಮೀನುಗಾರರ ಸಾಲಮನ್ನಾ ಆಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಮೀನುಗಾರರ ಸಾಲ ಮನ್ನಾ ಆದೇಶ ಪತ್ರ ಜಿಲ್ಲಾಧಿಕಾರಿಯವರ ಮೂಲಕ ಫಲಾನುಭವಿಗಳ ಮನೆಗೆ ಕಳುಹಿಸುವ ಕೆಲಸ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು. ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಂಪುವಿನಲ್ಲಿ ಶನಿವಾರ ಸಂಜೆ ನಡೆದ ಬೈಂದೂರು ವಿಧಾನ ಸಭಾ […]