ಆಜಾದಿ ಕಾ ಅಮೃತ್ ಮಹೋತ್ಸವ್: ಭಾರತೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಿರುವ ಯುಕೆ
ಭಾರತದ 75 ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಆಚರಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ನಿಂದ ಬ್ರಿಟನ್‌ನಲ್ಲಿ ಅಧ್ಯಯನ ಮಾಡಲು ಭಾರತೀಯ ವಿದ್ಯಾರ್ಥಿಗಳಿಗೆ 75 ಸಂಪೂರ್ಣ ಅನುದಾನಿತ ವಿದ್ಯಾರ್ಥಿವೇತನವನ್ನು ನೀಡಲು ಯುಕೆ ಸರ್ಕಾರವು ನಿರ್ಧರಿಸಿದ್ದು, ಭಾರತದಲ್ಲಿನ ಪ್ರಮುಖ ಕಂಪನಿಗಳೊಂದಿಗೆ ಪಾಲುದಾರಿಕೆ ನಡೆಸಿದೆ. ಇಲ್ಲಿಯವರೆಗೆ ಒಂದು ವರ್ಷದ ಸ್ನಾತಕೋತ್ತರ ಕಾರ್ಯಕ್ರಮಕ್ಕಾಗಿ ನೀಡಲಾದ ಅತಿ ಹೆಚ್ಚು ಸಂಖ್ಯೆಯ ಸಂಪೂರ್ಣ ಅನುದಾನಿತ ವಿದ್ಯಾರ್ಥಿವೇತನ ಇದಾಗಿದೆ ಎಂದು ಬ್ರಿಟಿಷ್ ಹೈ ಕಮಿಷನ್ ಹೇಳಿದೆ. ಎಚ್‌ಎಸ್‌ಬಿಸಿ, ಪಿಯರ್ಸನ್ ಇಂಡಿಯಾ, ಹಿಂದೂಸ್ತಾನ್ ಯೂನಿಲಿವರ್, ಟಾಟಾ ಸನ್ಸ್ ಮತ್ತು ಡ್ಯುಯೊಲಿಂಗೋ ಮುಂತಾದ ಕಂಪನಿಗಳು […]