ಬ್ರಹ್ಮಾವರ: ಪ್ರಖ್ಯಾತ ಬರ್ಲಿನ್ ಓಕ್ ಪೀಠೋಪಕರಣ ಮಳಿಗೆ ಶುಭಾರಂಭ
ಬ್ರಹ್ಮಾವರ: ದೇಶಾದ್ಯಂತ ಮನೆ ಮಾತಾಗಿರುವ ರಾಯಲ್ ಓಕ್ ಮಾಲೀಕತ್ವದ ಹೆಸರಾಂತ ಪೀಠೋಪಕರಣಗಳ ಮಳಿಗೆ ಬರ್ಲಿನ್ ಓಕ್ ನ ನೂತನ ಶಾಖೆಯು ಬ್ರಹ್ಮಾವರದಲ್ಲಿ ಗುರುವಾರದಂದು ಶುಭಾರಂಭಗೊಂಡಿತು. ಮಾಂಡವಿ ರಿಯಲ್ ಎಸ್ಟೇಟ್ ಡೆವೆಲಪರ್ಸ್ ನ ವ್ಯವಸ್ಥಾಪಕ ನಿರ್ದೇಶಕ ಡಾ. ಜೆರ್ರಿ ವಿನ್ಸೆಂಟ್ ಡಯಾಸ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಬರ್ಲಿನ್ ಓಕ್ ಪೀಠೋಪಕರಣಗಳು ಮಹಾನಗರಗಳಾದ ಮುಂಬೈ ಬೆಂಗಳೂರು ಕೊಲ್ಕತ್ತಾ ಹೈದರಾಬಾದ್ ಮುಂತಾದ ಕಡೆ ಮಾತ್ರ ದೊರೆಯುತ್ತಿತ್ತು. ಇದೀಗ ಬ್ರಹ್ಮಾವರದಲ್ಲಿ ಸಂಸ್ಥೆಯ ಶಾಖೆ ಶುಭಾರಂಭಗೊಂಡಿರುವುದು ಉಡುಪಿ ಜನತೆಗೆ ಉತ್ಕೃಷ್ಟ ಗುಣಮಟ್ಟದ […]
ಫಾರ್ಚ್ಯೂನ್ ಆರೋಗ್ಯ ವಿಜ್ಞಾನ ಸಂಸ್ಥೆಯಲ್ಲಿ ಸಾಂಪ್ರದಾಯಿಕ ದಿನ ಆಚರಣೆ
ಬ್ರಹ್ಮಾವರ: ಇಲ್ಲಿನ ಮಧುವನ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಫಾರ್ಚ್ಯೂನ್ ಆರೋಗ್ಯ ವಿಜ್ಞಾನ ಸಂಸ್ಥೆಯಲ್ಲಿ ಓಣಂ ಸಂಭ್ರಮ ಆಚರಣೆಯ ಅಂಗವಾಗಿ ಸಂಭ್ರಮ -2022 ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಬುಧವಾರದಂದು ಸಾಂಪ್ರದಾಯಿಕ ದಿನವನ್ನು ಮದರ್ ಪ್ಯಾಲೇಸ್ ಆಡಿಟೋರಿಯಂನಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಫಾರ್ಚ್ಯೂನ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ತಾರಾನಾಥ್ ಶೆಟ್ಟಿ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲೆ ಸ್ಮಿತಾ ವಿಜೇತರಿಗೆ ಬಹುಮಾನ ವಿತರಿಸಿದರು. ಕಾಲೇಜಿನ ಅಧ್ಯಾಪಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಫಾರ್ಚ್ಯೂನ್ ಆರೋಗ್ಯ ವಿಜ್ಞಾನ ಸಂಸ್ಥೆಯಲ್ಲಿ “ಆರಂಭಮ್ – 2022” ಓಣಂ ಸಾಂಸ್ಕೃತಿಕ ಕಾರ್ಯಕ್ರಮ
ಬ್ರಹ್ಮಾವರ: ಇಲ್ಲಿನ ಮಧುವನ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಫಾರ್ಚ್ಯೂನ್ ಆರೋಗ್ಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಓಣಂ ಹಬ್ಬದ ಅಂಗವಾಗಿ “ಆರಂಭಮ್ – 2022” ಸಾಂಸ್ಕೃತಿಕ ಕಾರ್ಯಕ್ರಮ ಮಂಗಳವಾರದಂದು ಮದರ್ ಪ್ಯಾಲೇಸ್ ಆಡಿಟೋರಿಯಂನಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲೆ ಸ್ಮಿತಾ ಮಾತನಾಡಿ, ಓಣಂ ಎನ್ನುವುದು ಕೇರಳದಲ್ಲಿ ಚಕ್ರವರ್ತಿ ಬಲಿಯ ನೆನಪಿಗಾಗಿ ಆಚರಿಸುವ ಹಬ್ಬ. ಇದು ಕೇರಳದ ಸಂಸ್ಕೃತಿ, ಧಾರ್ಮಿಕತೆ ಮತ್ತು ಪರಂಪರೆಯನ್ನು ಬಿಂಬಿಸುವ ಈ ಹಬ್ಬಕ್ಕೆ ಬಹಳ ಮಹತ್ವ ಇದೆ. ಈ ಹಬ್ಬವನ್ನು ಆಚರಿಸುವ ಮೂಲಕ […]
ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ
ಬ್ರಹ್ಮಾವರ: ಡಾ. ಸರ್ವಪಳ್ಳಿ ರಾಧಾಕೃಷ್ಣನ್ ರವರು ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ ಎನ್ನುತ್ತಿದ್ದರು. ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ವಿದ್ಯಾಲಕ್ಷ್ಮೀ ಸಮೂಹ ಸಂಸ್ಥೆಯಲ್ಲಿ ಸೋಮವಾರದಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಸುಬ್ರಹ್ಮಣ್ಯರವರು ಉಪನ್ಯಾಸಕರಿಗೆ ಶುಭಾಶಯ ಕೋರಿದರು. ನಿರ್ದೇಶಕಿ ಶ್ರೀಮತಿ ಮಮತಾ, ಪ್ರಾಂಶುಪಾಲೆ ಶ್ರೀಮತಿ ಡಾ. ಸೀಮಾ ಭಟ್ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಕು.ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಸಿದ್ಧಿ ವಿನಾಯಕ ಫ್ರೆಂಡ್ಸ್ ಕುಮ್ರಗೊಡು ವತಿಯಿಂದ ಬಾಲಕನಿಗೆ ಧನಸಹಾಯ
ಬ್ರಹ್ಮಾವರ : ಶ್ರೀ ಸಿದ್ಧಿ ವಿನಾಯಕ ಫ್ರೆಂಡ್ಸ್ ಕುಮ್ರಗೊಡು ಇವರು ಗಣೇಶ್ ಚತುರ್ಥಿಯ ಪ್ರಯುಕ್ತ ವೇಷಗಳನ್ನು ಧರಿಸಿ ಒಂದು ಲಕ್ಷ ರೂ ಗಳನ್ನು ಸಂಗ್ರಹಿಸಿದ್ದು, ಈ ಹಣವನ್ನು ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ 9 ವರ್ಷದ ಪುಟ್ಟ ಬಾಲಕ, ಕೊಕ್ಕರ್ಣೆ ಕಲ್ಲುಗೊಳಿ ನಿವಾಸಿಯಾದ ರಂಜನ್ ಚಿಕಿತ್ಸೆಗೆ ಧನಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ.