ಸಾಯಿರಾದ ರೆಸಿಡೆನ್ಸಿಯಲ್ಲಿ ಸಾರ್ವಜನಿಕ ಉಚಿತ ನೇತ್ರ ತಪಾಸಣಾ ಶಿಬಿರ ಸಂಪನ್ನ

ಉಡುಪಿ: ಲಯನ್ಸ್ ಕ್ಲಬ್ ಬ್ರಹ್ಮಗಿರಿ ಹಾಗೂ ಅಬಿ ನೇತ್ರ ಐಕೇರ್, ಓಕುಡೆ ಡೈಗ್ನೋಸ್ಟಿಕ್ ಸೆಂಟರ್ ಉಡುಪಿ ಹಾಗೂ ಸಾಯಿರಾಧಾ ರೆಸಿಡೆನ್ಸಿ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವು ನವಂಬರ್ 6 ರವಿವಾರದಂದು ಸಾಯಿರಾಧಾ ರೆಸಿಡೆನ್ಸಿ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಲಯನ್ಸ್ ಕ್ಲಬ್ ಬ್ರಹ್ಮಗಿರಿ ಅಧ್ಯಕ್ಷ ಲಯನ್ ಉಮೇಶ್ ನಾಯಕ್, ಸೊಸೈಟಿಯ ಅಧ್ಯಕ್ಷ ಜಹೀರ್ ಅಲಿ, ಕಾರ್ಯದರ್ಶಿ ಜೀವನ್ ವಿಲಿಯಂ ಡಿಸೋಜ, ಡಾಕ್ಟರ್ ಅಭಿನಯ ಅಶೋಕ್ ಓಕುಡೆ ಮತ್ತು ಜಿಲ್ಲಾ ವಿಝನ್ ಕೇರ್ ಸಂಯೋಜಕ ಲಯನ್ ವಾದಿರಾಜ ರಾವ್ […]

ಉಡುಪಿ-ಮಂಗಳೂರು ಲಯನ್ಸ್ ಕ್ಲಬ್ ಗಳ ಸಮಾಗಮ

ಉಡುಪಿ: ಲಯನ್ಸ್ ಕ್ಲಬ್ ಬ್ರಹ್ಮಗಿರಿ, ಉಡುಪಿ ಮತ್ತು ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಮಂಗಳೂರು ಈ ಎರಡು ಕ್ಲಬ್ ಗಳ ಸಮಾಗಮವು ಇತ್ತೀಚಿಗೆ ಉಡುಪಿಯ ಬಲೈಪಾದೆ ನಿತ್ಯಾನಂದ ಆರ್ಕೇಡ್ ಕಾಂಪ್ಲೆಕ್ಸ್ ಉದ್ಯಾವರ ಇಲ್ಲಿ ನೆರವೇರಿತು. ಜಿಲ್ಲಾ 317ಸಿಯ ಪ್ರಥಮ ಉಪ ಜಿಲ್ಲಾ ಗವರ್ನರ್ ಡಾ. ನೇರಿ ಕರ್ನೆಲಿಯೋ ಮುಖ್ಯ ಅತಿಥಿಯಾಗಿ ಮಾತನಾಡಿ, ಈ ರೀತಿಯ ಸಂಗಮ ಎರಡು ಜಿಲ್ಲೆಗಳ ಲಯನ್ ಸದಸ್ಯರು ಸಮಾಜಕ್ಕೆ ಇನ್ನೂ ಹೆಚ್ಚಿನ ಅಗತ್ಯ ಸೇವೆಗಳನ್ನು ಮಾಡುವ ಬಗ್ಗೆ ಮತ್ತು ಕ್ಲಬ್ ಗಳ ಮಧ್ಯೆ […]

ರಾಜ್ಯೋತ್ಸವ ಪ್ರಯುಕ್ತ ಮಕ್ಕಳಿಗೆ ಕನ್ನಡ ಗೀತೆ ಸ್ಪರ್ಧೆ

ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಜಿಲ್ಲೆಯ 5 ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ನವೆಂಬರ್ 1 ರಂದು ಮಧ್ಯಾಹ್ನ 1.30 ಕ್ಕೆ ನಗರದ ಬ್ರಹ್ಮಗಿರಿ ಜಿಲ್ಲಾ ಬಾಲಭವನದಲ್ಲಿ ಕನ್ನಡ ಗೀತೆ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಕನ್ನಡ ನಾಡಿನ ಕವಿ, ಸಾಹಿತಿಗಳಿಂದ ರಚಿಸಲ್ಪಟ್ಟ ಕನ್ನಡ ನಾಡಿಗೆ ಸಂಬಂಧಿಸಿದ ಸುಗಮ ಸಂಗೀತ ಹಾಗೂ ಸಿನಿಮಾ ಗೀತೆಗಳನ್ನು ಹಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 0820-2574972 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು […]

ಬ್ರೌನ್ ವುಡ್ ಫರ್ನೀಚರ್: ಅತ್ಯಾಧುನಿಕ ಪೀಠೋಪಕರಣಗಳ ಬೃಹತ್ ಮಳಿಗೆ ಶುಭಾರಂಭ

ಉಡುಪಿ: ಇಲ್ಲಿನ ಅಂಬಲಪಾಡಿ ಬೈಪಾಸ್ ಬಳಿಯ ಬ್ರಹ್ಮಗಿರಿಯ ಸುರಭಿ ಲೋಟಸ್ ಕಟ್ಟಡದಲ್ಲಿ ಬ್ರೌನ್ ವುಡ್ ಫರ್ನೀಚರ್ ಶೋರೂಂನ ಉದ್ಘಾಟನಾ ಕಾರ್ಯಕ್ರಮವು ಅ.16 ಭಾನುವಾರದಂದು ನಡೆಯಿತು. ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇಗುಲದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಂಬಲಪಾಡಿ ಒಂದು ಯೋಜನಾಬದ್ದ ನಗರ. ಇಲ್ಲಿನ ಜನ ಶಾಂತಿಪ್ರಿಯರು. ಅಂಬಲಪಾಡಿಯ ಪ್ರಮುಖ ರಸ್ತೆಯಲ್ಲಿ ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಪೀಠೋಪಕರಣಗಳ ಬೃಹತ್ ಮಳಿಗೆಯನ್ನು ಆರಂಭಿಸಿರುವುದರಿಂದ ಇಲ್ಲಿನ ಜನತೆಗೆ ಅನುಕೂಲವಾಗಲಿದೆ. ಸಂಸ್ಥೆಯು ಗುಣಮಟ್ಟ […]

ಬೀದಿ ನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ

ಉಡುಪಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ 2022-23ನೇ ಸಾಲಿನಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರಿ ಕಾರ್ಯಕ್ರಮಗಳ ಕುರಿತು ಬೀದಿ ನಾಟಕ, ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲು ಬೀದಿನಾಟಕ, ಜಾನಪದ ಸಂಗೀತ ಕಲಾ ತಂಡಗಳನ್ನು ಆಯ್ಕೆಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯಿಂದ 3 ಬೀದಿನಾಟಕ ಹಾಗೂ 3 ಜಾನಪದ ಸಂಗೀತ ಕಲಾತಂಡಗಳನ್ನು ಆಯ್ಕೆಮಾಡಲಾಗುತ್ತದೆ. ಪ್ರತಿ ಬೀದಿ ನಾಟಕ ತಂಡದಲ್ಲಿ 8 ಜನ ಕಲಾವಿದರಿರಬೇಕು. ಅದರಲ್ಲಿ ಕಡ್ಡಾಯವಾಗಿ ಇಬ್ಬರು ಮಹಿಳೆಯರು ಹಾಗೂ ಒಬ್ಬರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ […]