ತಾರಾನಾಥ್ ಮೇಸ್ತ ಅವರ ‘ಅವಧೂತ ಲೀಲಾಮೃತ’ ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀಜಿ ಕೃತಿ ಲೋಕಾರ್ಪಣೆ
ಬ್ರಹ್ಮಾವರ: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಬ್ರಹ್ಮಾವರದ ಅಪ್ಪ ಅಮ್ಮ ಅನಾಥಾಲಯದ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಸರಳಾ ಕಾರ್ಯಕ್ರಮದಲ್ಲಿ ತಾರಾನಾಥ್ ಮೇಸ್ತ ಶಿರೂರು ಅವರ “ಅವಧೂತ ಲೀಲಾಮೃತ” ಶ್ರೀಸದ್ಗುರು ನಿತ್ಯಾನಂದ ಸ್ವಾಮೀಜಿ ಕೃತಿ ಲೋಕಾರ್ಪಣೆಗೊಂಡಿತು. ಸಮಾಜಸೇವಕ ನಿತ್ಯಾನಂದ ಒಳಕಾಡು ಕೃತಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ, ನಿತ್ಯಾನಂದ ಸ್ವಾಮೀಜಿಗಳ ಕುರಿತ ಅವಧೂತ ಲೀಲಾಮೃತ ಕೃತಿ ಎಲ್ಲರೂ ಓದಲೇಬೇಕಾದ ಅಮೂಲ್ಯ ಆಧ್ಯಾತ್ಮಿಕ ಗ್ರಂಥ. ಕಳೆದ ಅರವತ್ತು ವರ್ಷಗಳ ಹಿಂದೆ ಬಹಳಷ್ಟು ಕರಾವಳಿಗರು ಬದುಕು ಕಟ್ಟಿಕೊಳ್ಳಲು ಮುಂಬೈಗೆ ತೆರಳಿದ್ದರು. ಅಲ್ಲಿ […]