ಎ.14 ರಿಂದ 16ರ ವರೆಗೆ ಕೆಳಾರ್ಕಳಬೆಟ್ಟು ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಬ್ರಹ್ಮಕಲಶೋತ್ಸವ- ಹನುಮ ಜಯಂತಿ ಉತ್ಸವ
ಉಡುಪಿ: ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ವಿಷ್ಣುಮೂರ್ತಿನಗರ ಕೆಳಾರ್ಕಳಬೆಟ್ಟು ಇದರ ಶ್ರೀ ದೇವರ ನೂತನ ರಜತ ಬಿಂಬ ಪ್ರತಿಷ್ಠೆ ಪ್ರಯುಕ್ತ ಬ್ರಹ್ಮಕಲಶೋತ್ಸವ ಮತ್ತು ಹನುಮ ಜಯಂತಿ ಉತ್ಸವ ಏಪ್ರಿಲ್ 13 ರಿಂದ 16 ರವರಗೆ ನಡೆಯಲಿದೆ ಎಂದು ಶಾಲೆಯ ಅಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ ಬೆಳ್ಕಲೆ ಹೇಳಿದರು. ಉಡುಪಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 14 ರಂದು ಶ್ರೀ ಮಹಾಗಣಪತಿ, ಶ್ರೀ ದುರ್ಗಾಪರಮೇಶ್ವರಿ, ಶ್ರೀ ವೀರ ಮಾರುತಿ ದೇವರ ಪುನಃ ಪ್ರತಿಷ್ಠೆ ನಡೆಯಲಿದೆ. ಏಪ್ರಿಲ್ 16 […]