ಹೊಸ ಪಡಿತರ ಚೀಟಿ ಅರ್ಜಿ ವಿಲೇವಾರಿಗೆ ಸರ್ಕಾರದ ಅಂಗೀಕಾರ ಮುದ್ರೆ

ಮಂಗಳೂರು/ಉಡುಪಿ: ಆದ್ಯತಾ ಪಡಿತರ ಚೀಟಿಗೆ ಹೊಸದಾಗಿ ಅರ್ಜಿ ಸಲ್ಲಿಸಿರುವವರಿಗೆ ಸಮಾಧಾನ ತರುವ ವಿಚಾರವೊಂದು ಬಂದಿದೆ. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದು, ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಸರ್ಕಾರವು ಅಂಗೀಕಾರ ಮುದ್ರೆಯೊತ್ತಿದೆ. ರಾಜ್ಯದಲ್ಲಿ ಸುಮಾರು 1.55 ಲಕ್ಷ ಅರ್ಹ ಅರ್ಜಿಗಳಿದ್ದು, ಇದರಲ್ಲಿ ದ.ಕ ಜಿಲ್ಲೆಯಲ್ಲಿ 3356 ಮತ್ತು ಉಡುಪಿ ಜಿಲ್ಲೆಯಲ್ಲಿ 4367 ಅರ್ಜಿಗಳು ಅರ್ಹತೆ ಪಡೆದಿವೆ. ಪಡಿತರಕ್ಕಾಗಿ ಅರ್ಜಿ ಗುಜರಾಯಿಸಿದವರಿಗೆ ಶ್ರೀಘ್ರದಲ್ಲೆ ರೇಷನ್ ಕಾರ್ಡ್ ದೊರೆಯಲಿದೆ. ಅವಳಿ ಜಿಲ್ಲೆಗಳಲ್ಲಿ ಅರ್ಜಿ ಹಾಕಿದವರ ವಾಸಸ್ಥಳ ಪರಿಶೀಲನಾ ಕಾರ್ಯ ಪೂರ್ಣಗೊಂಡಿದ್ದು, ಅರ್ಹ […]