ಬೂತ್ ವಿಜಯ ಸಂಕಲ್ಪದಿಂದ ಕ್ಷೇತ್ರ ವಿಜಯ ಸಂಕಲ್ಪ: ಕಾರ್ಯಕರ್ತರಿಗೆ ಕುಯಿಲಾಡಿ ಕರೆ

ಉಡುಪಿ: ಜಿಲ್ಲೆಯ 1,111 ಬೂತ್ ಗಳಲ್ಲೂ ಜ.2 ರಿಂದ ಜ.12ರ ವರೆಗೆ ನಡೆಯಲಿರುವ ಬೂತ್ ವಿಜಯ ಅಭಿಯಾನದಲ್ಲಿ ಪಕ್ಷದ ಎಲ್ಲ ಸ್ಥರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಣ್ಣ ಪುಟ್ಟ ವಿಚಾರಗಳನ್ನು ಬದಿಗಿಟ್ಟು ಬೂತ್ ವಿಜಯದ ಸಂಕಲ್ಪದೊಂದಿಗೆ ಕ್ಷೇತ್ರ ಮತ್ತು ರಾಜ್ಯವನ್ನು ಗೆಲ್ಲಲು ಸನ್ನದ್ಧರಾಗಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾ‌ಧ್ಯಕ್ಷ‌ ಕುಯಿಲಾಡಿ‌ ಸುರೇಶ್ ನಾಯಕ್ ಕರೆ ನೀಡಿದರು. ಅವರು ಬಿಜೆಪಿ ವತಿಯಿಂದ ನಡೆಯುವ ‘ಬೂತ್ ವಿಜಯ ಅಭಿಯಾನ’ವನ್ನು ಕಾಪು‌ ವಿಧಾನಸಭಾ‌ ಕ್ಷೇತ್ರ‌ ವ್ಯಾಪ್ತಿಯ […]