ರಾಗದ ಮೂಲಕ ಭಾವ ಮೂಡಿದಾಗಲೇ ಸಂಗೀತದ ವಿಕಸನ: ಅರವಿಂದ ಚೊಕ್ಕಾಡಿ
ಕಾರ್ಕಳ: ರಾಗದ ಮೂಲಕ ಭಾವ ಮೂಡಿದಾಗಲೇ ಸಂಗೀತದ ವಿಕಸನ ಎಂದು ಸಾಹಿತಿ ಅರವಿಂದ ಚೊಕ್ಕಾಡಿ ಹೇಳಿದರು. ಅವರು ಕವಿ ಶ್ರೀನಿವಾಸ ಸಾಯಕ್ ಬರೆದ ನನ್ನದಲ್ಲದ ಕವಿತೆ ಕವನ ಸಂಕಲನವನ್ನು ಹಿರ್ಗಾನದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಕಾವ್ಯದ ಸೃಷ್ಟಿಯೇ ಪ್ರೀತಿ, ಕಾವ್ಯವನ್ನು ಅಭಿವೃದ್ಧಿಪಡಿಸುವುದು ಶಬ್ದಗಳು, ಕಾವ್ಯಾಭಾವದ ಅಭಿವ್ಯಕ್ತಿ ಸೂಕ್ಷ್ಮತೆಗಳು ಅವಕಾಶಗಳು ತೆರೆದಂತೆ. ಶಬ್ದಗಳು ಭಾವಗಳನ್ನು ಕಲಾತ್ಮಕವಾಗಿ ವ್ಯಕ್ತಪಡಿಸುವಂತಿರುತ್ತವೆ ಎಂದರು. ಮುಖ್ಯ ಅತಿಥಿಯಾಗಿ ಸಾಹಿತಿ ಅಷ್ಟಾವಧಾನಿ ಉಮೇಶ್ ಗೌತಮ್ ನಾಯಕ್ ಮಾತನಾಡಿದರು. ಕವಿ ಶ್ರೀನಿವಾಸ ನಾಯಕ್ ಉಪಸ್ಥಿತರಿದ್ದರು. ರವೀಂದ್ರ ಸಣ್ಣಕ್ಕಿಬೆಟ್ಟು ನಿರೂಪಿಸಿದರು. […]