ಹೊಸವರ್ಷಕ್ಕೆ ಶುಭ ಸುದ್ದಿ: ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಮುಂಬೈ ಷೇರು ಮಾರುಕಟ್ಟೆ; ಐಟಿ ಹಾಗೂ ಆಟೋಮೊಬೈಲ್ ನಾಗಾಲೋಟ
ಮುಂಬೈ: ಯುಗಾದಿ ಹಬ್ಬದ ದಿನವಾದ ಮಂಗಳವಾರ ಬೆಳಗ್ಗೆ ಮುಂಬೈ ಷೇರು ಮಾರುಕಟ್ಟೆಯ ವಹಿವಾಟು ಆರಂಭದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದವು, ಮಾಹಿತಿ ತಂತ್ರಜ್ಞಾನ ಮತ್ತು ಆಟೋಮೊಬೈಲ್‌ನಂತಹ ವಲಯಗಳಲ್ಲಿ ಏರಿಕೆ ಹೆಚ್ಚಳ ಕಂಡುಬಂದವು. ಸೆನ್ಸೆಕ್ಸ್ 75,000 ಗಡಿಯನ್ನು ದಾಟಿದರೆ, ನಿಫ್ಟಿ 22765.30 ಕ್ಕೆ ತಲುಪಿತು. ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ಇನ್ಫೋಸಿಸ್‌ನಂತಹ ಐಟಿ ದಿಗ್ಗಜ ಸಂಸ್ಥೆಗಳ ಷೇರುಗಳು ಇಂದು ಅತಿ ಹೆಚ್ಚು ಲಾಭ ಗಳಿಸಿದವು. ಆಟೋ ಸ್ಟಾಕ್‌ಗಳಲ್ಲಿ, ಹೀರೋ ಮೋಟೋಕಾರ್ಪ್ ಮತ್ತು ಟಾಟಾ ಮೋಟಾರ್ಸ್ ಇತರರನ್ನು ಮೀರಿಸಿದೆ. […]