ತ್ರಿಶಾ ಕಾಲೇಜು ವಿದ್ಯಾರ್ಥಿಗಳಿಂದ ಕೈಗಾರಿಕಾ ಘಟಕಕ್ಕೆ ಭೇಟಿ
ಕಟಪಾಡಿ: ಮೇ 31ರಂದು ತೃತೀಯ ವರ್ಷದ ಬಿ.ಕಾಂ ವಿದ್ಯಾರ್ಥಿಗಳಿಗೆ ಕಾರ್ಕಳದಲ್ಲಿರುವ ಬೋಳಾಸ್ ಆಗ್ರೋ ಪ್ರೈ. ಲಿಗೆ ಕೈಗಾರಿಕಾ ಭೇಟಿಯನ್ನು ಹಮ್ಮಿಕೊಳ್ಳಲಾಗಿದ್ದು ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಂಡರು. ಜೊತೆಗೆ ಬ್ರಹ್ಮಾವರದ ಅನಾಥಾಶ್ರಮಕ್ಕೆ ಭೇಟಿ ಕೊಟ್ಟು ವಿದ್ಯಾರ್ಥಿಗಳು ಸಂಬಂಧಗಳ ಬೆಲೆಯನ್ನು ತಿಳಿದುಕೊಳ್ಳುವಂತೆ ಮಾಡಲಾಯಿತು. ಕಾರ್ಯಕ್ರಮದಲ್ಲಿ 120ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ತಮ್ಮ ಕೈಗಾರಿಕಾ ಭೇಟಿ ಹಾಗೂ ವೃದ್ಧಾಶ್ರಮದ ಭೇಟಿಯ ಅನುಭವದ ವರದಿಯನ್ನು ಕಾಲೇಜಿಗೆ ಸಲ್ಲಿಸಿದರು ತ್ರಿಶಾ ವಿದ್ಯಾ ಕಾಲೇಜಿನ ಪ್ರಾಧ್ಯಾಪಕರು ಜೊತೆಗೂಡಿದರು.