ಮಣಿಪಾಲ ಕೆಎಂಸಿಯಲ್ಲಿ ರಕ್ತದ ಗುಂಪು ಹೊಂದಾಣಿಕೆಯಿಲ್ಲದ ಮೂತ್ರಪಿಂಡ ಕಸಿ ಯಶಸ್ವಿ
ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯು ಮೂತ್ರಪಿಂಡದ ವೈಫಲ್ಯವನ್ನು ಹೊಂದಿದ್ದ ಮತ್ತು ಕಳೆದ ಆರು ತಿಂಗಳಿಂದ ಹಿಮೋಡಯಾಲಿಸಿಸ್ ನಲ್ಲಿರುವ ಮಗುವಿಗೆ ಮೊಟ್ಟ ಮೊದಲ ಬಾರಿಗೆ ರಕ್ತದ ಗುಂಪು ಎಬಿಒ ಹೊಂದಾಣಿಕೆಯಾಗದ ಮೂತ್ರಪಿಂಡವನ್ನು ಯಶಸ್ವಿಯಾಗಿ ಕಸಿ ಮಾಡಿತು. ಶಿವಮೊಗ್ಗದ 14 ವರ್ಷದ ಬಾಲಕನಿಗೆ 3 ವರ್ಷಗಳ ಹಿಂದೆ ಕಿಡ್ನಿ ವೈಫಲ್ಯ ಉಂಟಾಗಿ, ಬಾಲಕನ ದೈಹಿಕ ಬೆಳವಣಿಗೆ ಮತ್ತು ಚಟುವಟಿಕೆ ಕಡಿಮೆಯಾಯಿತು. ಹೆಚ್ಚಿನ ಆರೈಕೆಗಾಗಿ ಮಗುವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಮೂತ್ರಪಿಂಡ ವಿಭಾಗಕ್ಕೆ ಶಿಫಾರಸು ಮಾಡಲಾಯಿತು. ಬಳಿಕ ವೈದ್ಯರು ನೀಡಿದ ಚಿಕಿತ್ಸೆಯ […]