ಬಿಜೆಪಿ ಸಂಘಟನಾ ಪ್ರ.ಕಾರ್ಯದರ್ಶಿಯಾಗಿ ಬಿ.ಎಲ್. ಸಂತೋಷ್ ನೇಮಕ

ಬೆಂಗಳೂರು: ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಬಳಿಕ ಎರಡನೇ ಉನ್ನತ ಸ್ಥಾನವೆಂದು ಗುರುತಿಸಲ್ಪಟ್ಟಿರುವ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಯಾಗಿ ಉಡುಪಿ ಜಿಲ್ಲೆಯ ಬಿ.ಎಲ್. ಸಂತೋಷ್ ಅವರು ನೇಮಕವಾಗಿದ್ದಾರೆ. ಸಂತೋಷ್ ಅವರು ಈ ಹುದ್ದೆ ಅಲಂಕರಿಸಿದ ಮೊದಲ ಕನ್ನಡಿಗರಾಗಿದ್ದಾರೆ. ರಾಷ್ಟ್ರೀಯ ಸಂಘಟನಾ ಜಂಟೀ ಪ್ರಧಾನ ಕಾರ್ಯರ್ಶಿಯಾಗಿದ್ದ ಸಂತೋಷ್ ಅವರನ್ನು ಸಂಘಟನ ಪ್ರಧಾನ ಕಾರ್ಯದರ್ಶಿ ಯನ್ನಾಗಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಆದೇಶ ಹೊರಡಿಸಿದ್ದಾರೆ. ಉಡುಪಿಯ ಹಿರಿಯಡ್ಕ ದವರಾದ ಸಂತೋಷ್, ಆರ್ ಎಸ್ ಎಸ್ […]
ದೋಸ್ತಿ ವಲಯದಲ್ಲಿ ಗಡಗಡ: ರೆಸಾರ್ಟ್‌ನತ್ತ ಬಿಜೆಪಿ ಶಾಸಕರು

ಬೆಂಗಳೂರು: ದೋಸ್ತಿ ಸರಕಾರದ ರಾಜೀನಾಮೆ ಪರ್ವ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಸರ್ಕಾರ ಪತನಗೊಳ್ಳುವ ಭೀತಿಯಲ್ಲಿದ್ದ ದೋಸ್ತಿ ಸರ್ಕಾರ ಸುಪ್ರೀಂ ಆದೇಶದ ಬೆನ್ನಲ್ಲೇ ವಿಶ್ವಾಸ ಮತ ಯಾಚನೆಯ ಚಿಂತನೆ ನಡೆಸಿದೆ. ಅತೃಪ್ತ ಶಾಸಕರ ರಾಜೀನಾಮೆಯಿಂದ ಸರ್ಕಾರ ಪತನಗೊಳ್ಳುವ ಭೀತಿಯಲ್ಲಿತ್ತು. ಆದರೆ ಸ್ಪೀಕರ್ ನಡೆ ಅತೃಪ್ತ ಶಾಸಕರಿಗೆ ಕೊಂಚ ತಲೆನೋವು ನೀಡಿತ್ತು. ಒಂದೆಡೆ ರಾಜೀನಾಮೆ ಅಂಗೀಕಾರವಾಗದ ತಲೆನೋವಾದರೆ ಮತ್ತೊಂದೆಡೆ ಮನವೊಲಿಸಲು ಬಂದಿದ್ದ ನಾಯಕರನ್ನು ಎದುರಿಸಲಾಗದ ಪರಿಸ್ಥಿತಿ. ಹೀಗಿರುವಾಗ ಅತೃಪ್ತ ನಾಯಕರು ಸ್ಪೀಕರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. […]
ಬಿಜೆಪಿ ಸರ್ಕಾರ ಮಾಡಿದರೆ ನಮ್ಮ ಅಭ್ಯಂತರವಿಲ್ಲ: ರೋಶನ್ ಬೇಗ್

ಬೆಂಗಳೂರು ಜು. 07: ಬಿಜೆಪಿ ಸರ್ಕಾರ ರಚನೆ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ನಮ್ಮ ಆಂತರಿಕ ಕಚ್ಚಾಟದಿಂದ ಹೀಗಾಗಿದೆ. ಎಂದು ಕಾಂಗ್ರೆಸ್ ಅಮಾನತು ಶಾಸಕ ರೋಶನ್ ಬೇಗ್ ಹೇಳಿದ್ದಾರೆ. ನಾನು ರಾಜೀನಾಮೆ ಕೊಡೋದಾದ್ರೆ ಹೇಳಿಯೇ ಕೊಡ್ತೀನಿ. ನನಗೆ ಅಸಮಾಧಾನ ಇರೋದು ನಿಜ. ರಾಮಲಿಂಗಾರೆಡ್ಡಿ ಅವರಿಗೇ ಪಕ್ಷದಲ್ಲಿ ಸ್ಥಾನ ಮಾನ ಇಲ್ಲ. ಇದಕ್ಕೆಲ್ಲ ಕಾರಣ ನಾನು ಅಂದು ಪ್ರಸ್ತಾಪ ಮಾಡಿದ್ದ ಹೆಸರುಗಳೇ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಮೇಲೆ ವಾಗ್ದಾಳಿ ಮಾಡಿದರು. ನಾನು ಅವತ್ತು ಸಿದ್ದರಾಮಯ್ಯ ವಿರುದ್ಧ ಮಾತಾಡಿದೆ ಅಂತ ಸಸ್ಪೆಂಡ್ […]
ಗೋಮಾಂಸ ರಫ್ತಿನ ಹಿಂದಿರುವ ಅಸಲಿಯತ್ತು ಬೆತ್ತಲೆಗೊಳಿಸಲಿ: ಅನ್ಸಾರ್ ಅಹಮದ್
ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಯಶ್ ಪಾಲ್ ಸುವರ್ಣ ಅವರು ಗೋಕಳ್ಳತನ ಪ್ರಕರಣವನ್ನು ಹತೋಟಿಗೆ ತರಲು ಆಗ್ರಹಿಸುವ ಭರದಲ್ಲಿ ಸಮಾಜದ ಶಾಂತಿ ಕದಡುವ ರೀತಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ಗೋಕಳ್ಳತನವನ್ನು ಯಾವ ಜಾತಿ ಧರ್ಮದವರೂ ಸಮರ್ಥಿಸಿಕೊಳ್ಳುತ್ತಿಲ್ಲ. ಯಶ್ ಪಾಲ್ ಸುವರ್ಣದವರು ಭಾರತದಿಂದ ವಿದೇಶಕ್ಕೆ ರಫ್ತಾಗುತ್ತಿರುವ ಗೋಮಾಂಸದ ಬಗ್ಗೆ ಚಕಾರವೆತ್ತದೆ ಸ್ಥಳೀಯವಾಗಿ ನಡೆಯುತ್ತಿರುವ ಗೋಸಾಗಾಟ ಗೋಹತ್ಯೆಯ ಬಗ್ಗೆ ಮಾತನಾಡುತ್ತಿರುವುದು ಅವರ ದ್ವಿಮುಖ ನೀತಿಯನ್ನು ಎತ್ತಿ ತೋರಿಸುತ್ತಿದೆ. ಗೋಹತ್ಯೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಹೇಳಿಕೆ ನೀಡುವ ಪ್ರತಿಭಟನೆಯನ್ನು […]
ಬಿಜೆಪಿಯವರಿಗೆ ಗ್ರಾಮ ವಾಸ್ತವ್ಯದ ಕಲ್ಪನೆ ಬರದು: ಐವನ್

ಮಂಗಳೂರು: ಬಿಜೆಪಿಯವರು ಜೈಲುವಾಸ ಮಾಡಿ ಬಂದವರು. ಅವರಿಗೆ ಗ್ರಾಮ ವಾಸ್ತವ್ಯದ ಕಲ್ಪನೆ ಬರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಹೇಳಿದ್ದಾರೆ. ಮಂಗಳವಾರ ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಿಎಂ ಗ್ರಾಮ ವಾಸ್ತವ್ಯದ ಬಗ್ಗೆ ವ್ಯಂಗ್ಯವಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಐವನ್, ಕೋಟಾ ಶ್ರೀನಿವಾಸ್ ಪೂಜಾರಿ ಸ್ಥಳೀಯ ಸಂಸ್ಥೆಯಿಂದ ಚುನಾಯಿತರಾದವರು. ಆಡಳಿತದ ಅನುಭವ ಯೋಚನೆ-ಯೋಜನೆ ಇರುವವರು ಈ ರೀತಿ ಮಾತನಾಡುವುದಿಲ್ಲ. ಅಲ್ಲದೆ ಬಿಜೆಪಿಯವರು ಜೈಲುವಾಸ ಮಾಡಿದವರು. ಹೀಗಾಗಿ ಅವ್ರಿಗೆ ಗ್ರಾಮ ವಾಸ್ತವ್ಯದ […]