ಬೂತ್ ವಿಜಯ ಸಂಕಲ್ಪದಿಂದ ಕ್ಷೇತ್ರ ವಿಜಯ ಸಂಕಲ್ಪ: ಕಾರ್ಯಕರ್ತರಿಗೆ ಕುಯಿಲಾಡಿ ಕರೆ

ಉಡುಪಿ: ಜಿಲ್ಲೆಯ 1,111 ಬೂತ್ ಗಳಲ್ಲೂ ಜ.2 ರಿಂದ ಜ.12ರ ವರೆಗೆ ನಡೆಯಲಿರುವ ಬೂತ್ ವಿಜಯ ಅಭಿಯಾನದಲ್ಲಿ ಪಕ್ಷದ ಎಲ್ಲ ಸ್ಥರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಣ್ಣ ಪುಟ್ಟ ವಿಚಾರಗಳನ್ನು ಬದಿಗಿಟ್ಟು ಬೂತ್ ವಿಜಯದ ಸಂಕಲ್ಪದೊಂದಿಗೆ ಕ್ಷೇತ್ರ ಮತ್ತು ರಾಜ್ಯವನ್ನು ಗೆಲ್ಲಲು ಸನ್ನದ್ಧರಾಗಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕರೆ ನೀಡಿದರು. ಅವರು ಬಿಜೆಪಿ ವತಿಯಿಂದ ನಡೆಯುವ ‘ಬೂತ್ ವಿಜಯ ಅಭಿಯಾನ’ವನ್ನು ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ […]
ಬಿಜೆಪಿ ಟಿಕೆಟ್ ದಕ್ಕಿಸಿಕೊಳ್ಳಲು ಪ್ರಮೋದ್ ಮಧ್ವರಾಜ್ ತಮ್ಮ ಆತ್ಮಸಾಕ್ಷಿಗೆ ದ್ರೋಹ ಬಗೆದಿದ್ದಾರೆ: ರಮೇಶ್ ಕಾಂಚನ್

ಉಡುಪಿ: ಬಿಜೆಪಿ ಟಿಕೆಟ್ ದಕ್ಕಿಸಿಕೊಳ್ಳಲು ತಮ್ಮ ಆತ್ಮಸಾಕ್ಷಿಗೆ ದ್ರೋಹ ಬಗೆದು ಅವಕಾಶವಾದದ ರಾಜಕಾರಣವನ್ನು ಪ್ರಮೋದ್ ಮಧ್ವರಾಜ್ ಅವರು ಮಾಡುತ್ತಿದ್ದಾರೆ. ನಮೋ ಎಂದರೆ ಮೋಸ ಎಂದಿದ್ದ ಅವರು ಕಳೆದ ಬಾರಿ ಖಾಸಗಿ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯಕ್ಕೆ ನಂಬರ್ ವನ್ ಶಾಸಕನಾಗಿ ಮೂಡಿ ಬಂದಿದ್ದರೂ ಬಿಜೆಪಿಯ ಕಾರ್ಯಕರ್ತರು ನನ್ನನ್ನು ಸೋಲಿಸಿದ್ದಕ್ಕೆ ನನಗೆ ಕಿಂಚಿತ್ತೂ ಬೇಸರವಿಲ್ಲ, ಮೋದಿಯವರ ಕೈ ಬಲಪಡಿಸಲು ನನ್ನನ್ನು ಸೋಲಿಸಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಈ ಮಾತುಗಳು ಅವರ ಅವಕಾಶವಾದ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಉಡುಪಿ […]
ಅಟಲ್ ಉತ್ಸವ: ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನುಡಿಯಾದ ಐತಿಹಾಸಿಕ ‘ಬೂತ್ ಸಂಗಮ’ ಕಾರ್ಯಕ್ರಮ

ಉಡುಪಿ: ಬಿಜೆಪಿಯ ವಿಧಾನಸಭಾ ಚುನಾವಣೆಯ ಮುನ್ನುಡಿಯಾಗಿ ನಗರದ ಎಂಜಿಎಂ ಕಾಲೇಜು ಮೈದಾನದಲ್ಲಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 98 ನೇ ಜನ್ಮದಿನದ ಅಂಗವಾಗಿ ಅಟಲ್ ಉತ್ಸವ ಆಯೋಜಿಸಲಾಗಿದ್ದು ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಐತಿಹಾಸಿಕ ‘ಬೂತ್ ಸಂಗಮ’ ಕಾರ್ಯಕ್ರಮ ಭಾನುವಾರ ನಡೆಯಿತು. ಉಡುಪಿ ವಿಧಾನಸಭಾ ಕ್ಷೇತ್ರದ ‘ಬೂತ್ ಸಂಗಮ’ದಲ್ಲಿ ನಗರ ಮತ್ತು ಗ್ರಾಮಾಂತರ ಭಾಗದ 226 ಮತಗಟ್ಟೆಗಳಿಂದಲೂ ಕಾರ್ಯಕರ್ತರು ಭಾಗವಹಿಸಿ ಇತಿಹಾಸ ನಿರ್ಮಿಸಿದರು. ಮುಂಬರುವ ವಿಧಾನಸಭೆಯಲ್ಲಿ ಪಕ್ಷ ಸಂಘಟನೆಯ ಬಗ್ಗೆ ಮಂಥನ ನಡೆಸಲಾಯಿತು. […]
ಭಾರತ ಕಂಡ ಶ್ರೇಷ್ಠ ನಾಯಕ ಪ್ರಖರ ವಾಗ್ಮಿ ಯಶಸ್ವಿ ಪ್ರಧಾನಿ: ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ

ಐದು ವರ್ಷಗಳ ಕಾಲ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರವನ್ನು ಸಮರ್ಥವಾಗಿ ಮುನ್ನಡೆಸಿದ ಭಾರತ ಕಂಡ ಶ್ರೇಷ್ಠ ನಾಯಕ ಮತ್ತು ಶ್ರೇಷ್ಠ ವಾಗ್ಮಿ ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತವನ್ನು ವಿಶ್ವಗುರುವಾಗಿಸುವ ಹಲವಾರು ವಿಷಯಗಳಿಗೆ ಹಾಕಿದ ಅಡಿಪಾಯದ ಫಲವನ್ನು ಇಂದು ಭಾರತೀಯರೆಲ್ಲರೂ ಉಣ್ಣುತ್ತಿದ್ದಾರೆ. ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ, ಭಾರತ್ ಮಾಲಾ, ಸಾಗಾರ್ ಮಾಲಾ ದಂತಹ ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಅಡಿಪಾಯ, ಗ್ರಾಮ ಸಡಕ್ ಯೋಜನೆ, […]
ಡಿ.24ರಂದು ಅಟಲ್ ಉತ್ಸವ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಕೂಟ

ಉಡುಪಿ: ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 98ನೇ ಜನ್ಮದಿನಾಚರಣೆಯ ಅಂಗವಾಗಿ ಬಿಜೆಪಿ ಉಡುಪಿ ನಗರ ಹಾಗೂ ಗ್ರಾಮಾಂತರ ವತಿಯಿಂದ ಡಿ. 24ರಂದು ಸಂಜೆ 5ಗಂಟೆಗೆ “ಅಟಲ್ ಉತ್ಸವ” ರಾಷ್ಟ್ರಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಕೂಟ ಹಾಗೂ ಡಿ. 25ರಂದು ಸಂಜೆ 4ಗಂಟೆಗೆ ಬೂತ್ ಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಎರಡು ಕಾರ್ಯಕ್ರಮಗಳೂ ಉಡುಪಿ ಎಂಜಿಎಂ ಮೈದಾನದಲ್ಲಿ ನಡೆಯಲಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು. ಮಣಿಪಾಲದ ಕಂಟ್ರಿ ಇನ್ ಹೋಟೆಲ್ ನಲ್ಲಿ ಮಂಗಳವಾರ […]