ಸೌಜನ್ಯ ಪ್ರಕರಣ ಮರು ತನಿಖೆಗೆ ಒತ್ತಾಯಿಸಿ ದ.ಕ-ಉಡುಪಿ ಜಿಲ್ಲಾ ಬಿಜೆಪಿ ಶಾಸಕರಿಂದ ಮುಖ್ಯಮಂತ್ರಿಗಳಿಗೆ ಮನವಿ

ಮಂಗಳೂರು/ಉಡುಪಿ: ಸೌಜನ್ಯ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ದ.ಕ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರ ನಿಯೋಗವು ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಲು ರಾಜ್ಯ ಸರಕಾರಕ್ಕೆ ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಈ ವಿಷಯವನ್ನು ಸೌಜನ್ಯ ಪೋಷಕರಿಗೆ ನಾನು ತಿಳಿಸಿದ್ದೇನೆ. ಈಗಾಗಲೇ ಕಾನೂನು ಸಲಹೆಯನ್ನು ನಾನು ಪಡೆದಿರುವುದರಿಂದ ಸೌಜನ್ಯಳ ಪೋಷಕರು ಮೇಲ್ಮನವಿ ಸಲ್ಲಿಸಬಹುದು ಅಥವಾ ಸಿಬಿಐ ಮೇಲ್ಮನವಿ ಸಲ್ಲಿಸಲು ಅವಕಾಶವಿರುತ್ತದೆ. ನಿಯೋಗವು […]

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯವೈಖರಿ ಮೆಚ್ಚಿ ಬಿಜೆಪಿ ಸೇರ್ಪಡೆಗೊಂಡ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಮಾಜಿ ಅಧ್ಯಕ್ಷ

ಕಾಪು: ಕೇಂದ್ರದಲ್ಲಿ ಅಸ್ಥಿತ್ವದಲ್ಲಿರುವ ಭಾರತೀಯ ಜನತಾ ಪಾರ್ಟಿಯ ಅಭಿವೃದ್ದಿ ಪರ ಕಾಳಜಿಯಿಂದ ಹಾಗೂ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಕಾರ್ಯವೈಖರಿ ಮೆಚ್ಚಿ ಕಾಂಗ್ರೆಸ್ ನ ಬ್ಲಾಕ್ ದಕ್ಷಿಣ ವಲಯ ಉಪಾಧ್ಯಕ್ಷ ಹಾಗೂ ಕಟಪಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ , ಹಾಲಿ ಸದಸ್ಯ ಅಶೋಕ್ ರಾವ್ ಮತ್ತು ಕಟಪಾಡಿ ಗ್ರಾ.ಪಂ. ಕಾಂಗ್ರೆಸ್ ಬೆಂಬಲಿತ ಸದಸ್ಯ ಕಾಪು ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಕಾಪು ಮಂಡಲ ಅಧ್ಯಕ್ಷ […]

ಕಾನೂನು ಬಾಹಿರವಾಗಿ ಚಟುವಟಿಕೆ ನಡೆಸುವ ಕ್ಲಬ್ ಪಬ್ ಹಾಗೂ ಮಟ್ಕಾ ದಂಧೆ ನಿಲ್ಲಿಸಲು ಬಿಜೆಪಿ ಒತ್ತಾಯ

ಉಡುಪಿ: ಜಿಲ್ಲೆಯ ಮಣಿಪಾಲ ಪರಿಸರದಲ್ಲಿ ಮಧ್ಯರಾತ್ರಿಯ ನಂತರವೂ ಪರವಾನಿಗೆ ಇಲ್ಲದೆ, ಅಬಕಾರಿ ಇಲಾಖೆಯ ಸಿಎಲ್ 7 ಮತ್ತು ಸಿಎಲ್ 9 ಬಳಸಿಕೊಂಡು ಪಬ್ಬುಗಳಲ್ಲಿ ಮತ್ತು ಡಿಸ್ಕೋಗಳಲ್ಲಿ ಡಿಜೆ ಮ್ಯೂಸಿಕ್ ಬಳಸಿ ಚಟುವಟಿಕೆ ನಡೆಸುತ್ತಿದ್ದು, ಸದ್ರಿ ಚಟುವಟಿಕೆಗಳು ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿವೆ. ಅಬಕಾರಿ ಇಲಾಖೆಯ ಕಾನೂನಿನಂತೆ ಬಾರ್ ಮತ್ತು ರೆಸ್ಟೋರೆಂಟ್‌ ಗಳು ನಿಗದಿತ ಮುಕ್ತಾಯ ಅವಧಿಯ ನಂತರವೂ ತನ್ನ ವ್ಯವಹಾರವನ್ನು ಯಾವುದೇ ಅಳುಕಿಲ್ಲದೆ ನಡೆಸಿಕೊಂಡಿವೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಉಡುಪಿ ಜಿಲ್ಲೆಯಾದ್ಯಂತ ರಿಕ್ರಿಯೇಷನ್ ಕ್ಲಬ್‌ನ ಹೆಸರಿನಲ್ಲಿ ಇಸ್ಪಿಟ್ […]

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ದಾ ವಿರುದ್ದದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್

ನವದೆಹಲಿ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ವಿರುದ್ಧ ಆರಂಭಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ನಡ್ಡಾ ವಿರುದ್ಧ ಐಪಿಸಿ ಸೆಕ್ಷನ್ 171-ಎಫ್ ಅಡಿಯಲ್ಲಿ ‘ಅಸ್ಪಷ್ಟ ದೂರಿನಲ್ಲಿ’ ‘ಸಡಿಲವಾಗಿ ಹೊರಿಸಲಾದ ಅಪರಾಧದ’ ಆಧಾರದ ಮೇಲೆ ಎಫ್‌ಐಆರ್ ಅನ್ನು ‘ಅಜಾಗರೂಕತೆಯಿಂದ’ ದಾಖಲಿಸಲಾಗಿದೆ ಎಂದು ಕಂಡುಕೊಂಡಿದೆ. ಈ ನಿಬಂಧನೆಯು ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಅಥವಾ ಪ್ರಲೋಭನೆಯನ್ನು ದಂಡಿಸುತ್ತದೆ. ಮುಂದಿನ ಪ್ರಕ್ರಿಯೆಗಳಿಗೆ ಅನುಮತಿ ನೀಡುವುದು ಅರ್ಜಿದಾರರ ವಿರುದ್ಧ […]

ಹರೀಶ್ ಸಾಲಿಯಾನ್ ಬಿಜೆಪಿಯಿಂದ ಉಚ್ಛಾಟನೆ

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್‌ನ ಬಿಜೆಪಿ ಬೆಂಬಲಿತ ಸದಸ್ಯ ಹರೀಶ್ ಸಾಲಿಯಾನ್‌  ರವರನ್ನು ಶಿಸ್ತು ಮೀರಿದ ದುರ್ವರ್ತನೆಯ ನಡತೆಗಾಗಿ 6 ವರ್ಷಗಳ ಕಾಲ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.