ಬೆಂಗಳೂರಿನ ಕೆ.ಜಿ.ಹಳ್ಳಿ ಗಲಭೆ; ಕಾನೂನು ಕೈಗೆತ್ತಿಕೊಂಡವರಿಗೆ ಕಠಿಣ ಶಿಕ್ಷೆಯಾಗಬೇಕು: ಯುವ ಮೋರ್ಚಾ ಅಧ್ಯಕ್ಷ ಸಚಿನ್ ಸುವರ್ಣ ಪಿತ್ರೋಡಿ ಆಗ್ರಹ.
ಉಡುಪಿ: ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆ, ನೀಚ ಕೃತ್ಯವನ್ನು ಖಂಡಿಸುತ್ತೇನೆ. ಬೆಂಗಳೂರಿನ ಕಾವಲ್ ಸಂದ್ರ ಪೊಲೀಸ್ ವಸತಿಗೃಹದ ಗೇಟ್ ಮುರಿದು ಪೊಲೀಸರ ಮನೆಗಳಿಗೆ ನುಗ್ಗಿ ಮಕ್ಕಳ, ಮಹಿಳೆಯರ ಮೇಲೆ ಹಲ್ಲೆ ಮಾಡಲು ಮುಂದಾದ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಂಡು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಕಾಪು ಮಂಡಲದ ಬಿ.ಜೆ.ಪಿ ಯುವ ಮೋರ್ಚಾ ಪಿತ್ರೋಡಿ ಅಧ್ಯಕ್ಷ ಸಚಿನ್ ಸುವರ್ಣ ಆಗ್ರಹಿಸಿದ್ದಾರೆ. ಕೈಯಲ್ಲಿ ಮಾರಕಾಯುಧಗಳನ್ನು ಹಿಡಿದು ಬಂದ ಮತಾಂಧ ಉಗ್ರರು ಪೊಲೀಸರ ವಾಹನಗಳನ್ನು ಪುಡಿ ಮಾಡಿ, ಬೆಂಕಿ ಹಚ್ಚಿ, […]