ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹುಟ್ಟೂರು ಸವಣೂರಿಗೆ ಭೇಟಿ
ಮಂಗಳೂರು: ರಾಜ್ಯ ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಹುಟ್ಟೂರಾದ ಸವಣೂರಿಗೆ ಶುಕ್ರವಾರ ಭೇಟಿ ನೀಡಿದರು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನೂತನ ರಾಜ್ಯಾಧ್ಯಕ್ಷರನ್ನು ಸ್ವಾಗತಿಸಿದರು. ಅನಂತರ ಸವಣೂರು ಜೈನ ಬಸದಿಯಲ್ಲಿ ದೇವಿ ಪದ್ಮಾಂಬಿಕೆಗೆ ಪೂಜೆ ಸಲ್ಲಿಸಿ ವಾಹನ ಜಾಥಾದ ಮುಖಾಂತರ ತನ್ನ ತರವಾಡು ಮನೆ ಕುಂಜಾಡಿಗೆ ಆಗಮಿಸಿದ ಸನ್ಮಾನ್ಯ ನಳಿನ್ ಕುಮಾರ್ ಕಟೀಲ್ ಅವರನ್ನು ಕುಟುಂಬ ಸದಸ್ಯರು ಆತ್ಮೀಯವಾಗಿ ಬರಮಾಡಿಕೊಂಡರು. ಅನಂತರ ಕುಂಜಾಡಿ ಕುಟುಂಬಸ್ಥರು ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಳಿನ್ […]