ಬಿಜೆಪಿ ಕಾರ್ಯಕರ್ತರಿಂದ ಅಪ್ಪಿಕೊ ಚಳವಳಿ, ರಸ್ತೆಗಿಳಿದ ಕನ್ನಡಪರ ಸಂಘಟನೆಗಳು

ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆಗಳು ಮುಂದುವರಿದಿವೆ.ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾವೇರಿ ಹೋರಾಟ ವಿವಿಧ ರಂಗು ಪಡೆಯುತ್ತಿದೆ. ಬೆಂಗಳೂರಿನಿಂದ ಆಗಮಿಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲೆಯ ಸಂಜಯ ವೃತ್ತದಲ್ಲಿ ಜಮಾಯಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಬಿಜೆಪಿ ಕಾರ್ಯಕರ್ತರು ಕಾವೇರಿ ಪ್ರತಿಮೆಗೆ ಪೂಜೆ ಮಾಡಿ ವಿನೂತನವಾಗಿ ಅಪ್ಪಿಕೋ ಚಳವಳಿ ಮಾಡಿದರು. ಇನ್ನು ಕೆಆರ್​ಎಸ್ ನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕಳೆದ ಒಂದು ವಾರದಿಂದ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.ಒಂದಿಲ್ಲೊಂದು ರೀತಿಯಲ್ಲಿ […]