ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಸದ್ದು ಮಾಡ್ತಿದ್ದಾರೆ ಬಿಜೆಪಿಯ ಹೊಸ ಮುಖ ಗುರ್ಮೆ ಸುರೇಶ್ ಶೆಟ್ಟಿ
ಚುನಾವಣಾ ಪ್ರಚಾರ ರಂಗೇರುತ್ತಿದ್ದಂತೆ, ಚುನಾವಣೆಯ ಅಖಾಡಕ್ಕಿಳಿದಿರುವ ಅಭ್ಯರ್ಥಿಗಳ ಕುರಿತು ಶೋಧಿಸುವ ಕಾರ್ಯ, ಅವರ ಸಾಧನೆಗಳ ಮೈಲುಗಲ್ಲುಗಳ, ಭರವಸೆಯ ಮಾತುಗಳನ್ನು ಮತದಾರರ ಎದುರು ಬಿಚ್ಚಿಡುವ ಕೆಲಸವೂ ರಂಗು ಪಡೆಯುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಹೊಸಬರಿಗೆ ಟಿಕೆಟ್ ನೀಡುವ ಮೂಲಕ ಹೊಸ ಪರೀಕ್ಷೆಗೆ ಸಜ್ಜಾಗುತ್ತಿದೆ. ಸುರೇಶ್ ಶೆಟ್ಟಿ ಅವರ ಬಗ್ಗೆ: ಸಮಾಜ ಸೇವಕರಾಗಿರುವ ಸುರೇಶ ಶೆಟ್ಟಿ ಗುರ್ಮೆ ಅವರು ಒಬ್ಬ ಮಾದರಿ ರಾಜಕಾರಣಿ ಎಂದೇ ಹೇಳಬಹುದಾಗಿದೆ. ರಾಜಕೀಯ ಮಾತ್ರವಲ್ಲದೇ ಉತ್ತಮ ವಾಕ್ಚಾತುರ್ಯ ಹೊಂದಿರುವ […]