ಮಂಗಳೂರು: ಅರಣ್ಯ ಇಲಾಖೆಯ ಬೇಜವಾಬ್ದಾರಿಗೆ ಪ್ರಾಣತೆತ್ತ ಕಾಡುಕೋಣ:

ಮಂಗಳೂರು: ಮಂಗಳವಾರ ಬೆಳಿಗ್ಗೆ ಮಂಗಳೂರಿನ ನಗರಭಾಗದಲ್ಲಿ ಕಂಡುಬಂದಿದ್ದ ಕಾಡುಕೋಣ ಸಾವನ್ನಪ್ಪಿದೆ. ಕಾಡುಕೋಣವನ್ನು ಹಿಡಿಯಲು ಹಾಕಿರುವ ಅರಿವಳಿಕೆ ಮದ್ದು ಓವರ್ ಡೋಸ್ ಆಗಿ ಕಾಡುಕೋಣ ಸಾವನ್ನಪ್ಪಿದೆ. ಮಂಗಳೂರು ನಗರದೊಳಗೆ ಇಂದು ಬೆಳಗ್ಗೆ ಆ ಕಾಡುಕೋಣ ಆಗಮಿಸಿತ್ತು. ಅನಂತರ 2 ಗಂಟೆ ಕಾರ್ಯಾಚರಣೆ ಮಾಡಿ ಕಾಡುಕೋಣ ಅರಣ್ಯ ಇಲಾಖೆ ಸಿಬಂದಿ ಸೆರೆಹಿಡಿದಿದ್ದರು. ಈ ವೇಳೆ ಎರಡು ಬಾರಿ ಅರಿವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಆದರೆ ಅರಿವಳಿಕೆ ಮದ್ದು ಓವರ್ ಡೋಸ್ ಆಗಿ ಕಾಡುಕೋಣ ದಾರುಣ ಸಾವನ್ನಪಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬೇಜವಾಬ್ದಾರಿಗೆ […]