ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ ನಿರ್ಮಲಾ ಬಿರ್ಲಾ
ಉಡುಪಿ: ಬಿರ್ಲಾ ಕಂಪನಿಯ ಮಾಲಕರಾದ ಸಿ.ಕೆ.ಬಿರ್ಲಾರವರ ತಾಯಿ ನಿರ್ಮಲಾ ಬಿರ್ಲಾರವರು ಶ್ರೀಕೃಷ್ಣಮಠಕ್ಕಾಗಮಿಸಿ ದೇವರ ದರ್ಶನ ಪಡೆದು, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು. ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಸ್ವಾಗತಿಸಿದರು. ಆಡಳಿತ ವರ್ಗದ ವಾದಿರಾಜ್ ಉಪಸ್ಥಿತರಿದ್ದರು.