ಎಲೆಯೊಳಗಿರುವ ಈ ಪಕ್ಷಿಯ ಗೂಡನ್ನು ನೋಡಿದರೆ ಬೆರಗಾಗುತ್ತೀರಿ!
ಪಕ್ಷಿ ಎಲೆಯೊಳಗೆ ಗೂಡನ್ನು ನಿರ್ಮಿಸುವ ವಿಡಿಯೋ ಒಂದು ವೈರಲ್ ಆಗಿದ್ದು ಹಕ್ಕಿಗಳ ಕ್ರಿಯಾಶೀಲತೆಯನ್ನು ಈ ವಿಡಿಯೋ ಸಾರಿ ಹೇಳಿದೆ. ಪ್ರಕೃತಿಯನ್ನು ಆಳವಾಗಿ ನೋಡಿದರೆ ಪರಿಸರದ ಕ್ರಿಯಾಶೀಲತೆ,ಪಕ್ಷಿಗಳ ಕುತೂಹಲಕರ ಬದುಕು ನಮಗೆ ಅರ್ಥವಾಗುತ್ತದೆ. ಹತ್ತು ಸೆಕೆಂಡುಗಳ ಈ ವಿಡಿಯೋ ಕ್ಲಿಪ್ ದೊಡ್ಡ ಎಲೆಯನ್ನು ತೋರಿಸುತ್ತದೆ, ಆ ಎರಡೂ ಎಲೆಯ ತುದಿಗಳು ಗಟ್ಟಿಯಾಗಿ ಹೆಣೆದುಕೊಂಡಿದೆ.ಅದರ ನಡುವೆ ಗೂಡೊಂದು ಇದ್ದು ಅದರೊಳಗೆ ಪಕ್ಷಿಯ ಮೊಟ್ಟೆ ಇದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟುಮಾಡಿದ್ದು ಕೆಲವೇ ಕ್ಷಣದಲ್ಲಿ ಭರ್ಜರಿ ವೀಕ್ಷಣೆ ಪಡೆದಿದೆ.