ದಶಕಗಳ ಬಳಿಕ ಮಲ್ಪೆ ದಡಕ್ಕೆ ತೇಲಿ ಬಂತು ಗಂಗಾಮಾತೆಯ ಕೂದಲು
ಮಲ್ಪೆ: ಬಿಪರ್ ಜಾಯ್ ಚಂಡಮಾರುತದ ಬಳಿಕ ಇದೀಗ ಮಲ್ಪೆಯ ಸಮುದ್ರ ತೀರಕ್ಕೆ ವಿಚಿತ್ರ ವಸ್ತುಗಳು ತೇಲಿ ಬರುತ್ತಿದ್ದು ಮಲ್ಪೆ ಬೀಚ್ ನಲ್ಲಿ ಅಪರೂಪದ ಬಿಳಿ ಬಣ್ಣ ತ್ಯಾಜ್ಯ ಕಾಣಸಿಕ್ಕಿದೆ. ಶ್ಯಾವಿಗೆಯಂತಿರುವ ಈ ಪದಾರ್ಥವು ಸುಮಾರು ಎರಡು ದಶಕದ ನಂತರ ಇಲ್ಲಿನ ಸಮುದ್ರ ದಡದಲ್ಲಿ ಕಾಣಿಸಿಕೊಂಡಿದ್ದು, ಇದನ್ನು ಇಲ್ಲಿನ ಸ್ಥಳೀಯರು ಗಂಗಾಮಾತೆಯ ಕೂದಲು ಎಂದು ಹೇಳುತ್ತಾರೆ. ಇದು ಸುಮಾರು 10 ವರ್ಷದ ಹಿಂದೆ ಇಲ್ಲಿ ಕಾಣಸಿಕ್ಕಿದ್ದು, ಈ ಬಾರಿ ಯಥೇಚ್ಚವಾಗಿ ತೀರದಲ್ಲಿ ಬಿದ್ದಿದೆ ಎನ್ನುತ್ತಾರೆ ಹಿರಿಯರು. ಆದರೆ ಇದನ್ನು […]
ಚಂಡಮಾರುತ ಬಿಪರ್‌ಜೋಯ್ ಹಿನ್ನೆಲೆಯಲ್ಲಿ ಕಚ್ ಜಿಲ್ಲೆಯ 30000 ಕ್ಕೂ ಮಿಕ್ಕಿ ಸ್ಥಳೀಯರ ಸ್ಥಳಾಂತರ
ಅಹಮದಾಬಾದ್: ಬಿಪರ್‌ಜೋಯ್ ಚಂಡಮಾರುತವು ನಾಳೆ ಸಂಜೆ ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಪ್ರದೇಶ ಮತ್ತು ಪಕ್ಕದ ಪಾಕಿಸ್ತಾನದ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆಯಿದೆ. ಚಂಡಮಾರುತವು ಪ್ರಸ್ತುತ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ನೆಲೆಗೊಂಡಿದ್ದು ಪೋರಬಂದರ್‌ನಿಂದ ನೈಋತ್ಯಕ್ಕೆ 350 ಕಿಲೋಮೀಟರ್ ದೂರದಲ್ಲಿದೆ. ಚಂಡಮಾರುತ ಹಿನ್ನೆಲೆಯಲ್ಲಿ ಮಂಗಳವಾರ, ಗುಜರಾತ್‌ನ ಅಧಿಕಾರಿಗಳು ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಕರಾವಳಿ ಪ್ರದೇಶಗಳಿಂದ 37,800 ಜನರನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಹಲವಾರು ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ತಂಡಗಳು ಕಾರ್ಯಾಚರಣೆಗೆ ಸನ್ನದ್ದವಾಗಿವೆ. ಪರಿಹಾರ […]
ಬಿಪರ್‌ಜೋಯ್ ಚಂಡಮಾರುತ: ಮುಂಬೈ ವಿಮಾನ ಸಂಚಾರ ಅಸ್ತವ್ಯಸ್ತ; ಮುಂದಿನ ಪಯಣ ಗುಜರಾತ್ ನತ್ತ
ಮುಂಬೈ: ಬಿಪರ್‌ಜೋಯ್ ಚಂಡಮಾರುತ ಅರಬ್ಬಿ ಸಮುದ್ರದ ಮೇಲೆ ಬೀಸುತ್ತಿದ್ದು, ಹವಾಮಾನ ವೈಪರೀತ್ಯದಿಂದಾಗಿ ನಿನ್ನೆ ಸಂಜೆ ಮುಂಬೈನಲ್ಲಿ ವಿಮಾನ ಕಾರ್ಯಾಚರಣೆಗೆ ತೊಂದರೆಯಾಗಿದೆ. ಬಿಪರ್‌ಜೋಯ್ ಚಂಡಮಾರುತದ ತೀವ್ರತೆಯು “ಅತ್ಯಂತ ತೀವ್ರವಾದ ಚಂಡಮಾರುತ” ವಾಗಿ ಪರಿವರ್ತನೆ ಗೊಂಡಿದ್ದು, ಮುಂಬೈನಲ್ಲಿ ಭಾರೀ ಮಳೆ ಮತ್ತು ಗಾಳಿಯು ರಭಸದಿಂದ ಅಪ್ಪಳಿಸಿದೆ. ನೂರಾರು ಪ್ರಯಾಣಿಕರು ಗಂಟೆಗಟ್ಟಲೆ ತಮ್ಮ ವಿಮಾನಗಳಿಗಾಗಿ ಕಾಯುತ್ತಿದ್ದರಿಂದ ಮುಂಬೈ ವಿಮಾನ ನಿಲ್ದಾಣವು ಆತಂಕ ಮತ್ತು ಅವ್ಯವಸ್ಥೆಯ ದೃಶ್ಯಗಳಿಗೆ ಸಾಕ್ಷಿಯಾಯಿತು. ಹವಾಮಾನದ ಕಾರಣದಿಂದ ಹಲವಾರು ವಿಮಾನಗಳು ವಿಳಂಬಗೊಂಡು ಕೆಲವು ರದ್ದುಗೊಂಡವು. ಮತ್ತೆ ಕೆಲವು ಲ್ಯಾಂಡಿಗ್ […]