ಮಧ್ಯಪ್ರದೇಶದ ಬೃಹತ್​ ರಾಖಿ : ಗಿನ್ನೆಸ್ ಬುಕ್​ ಸೇರಲು ತಯಾರಿ

ಬಿಂಡಿ(ಮಧ್ಯಪ್ರದೇಶ): ಪ್ರೀತಿ ಮತ್ತು ರಕ್ಷಣೆಯ ಬಂಧವಾಗಿರುವ ರಾಖಿ ಸಹೋದರ ಮತ್ತು ಸಹೋದರಿಯರ ನಡುವಿನ ಮುರಿಯಾಲಾಗದ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡುವುದು ಸುಳ್ಳಲ್ಲ.ಇಂತಹ ಹಬ್ಬವನ್ನು ಮತ್ತಷ್ಟು ಸ್ಮರಣಿಯವಾಗಿಸಲು ಭಾರತೀಯ ಜನತಾ ಪಕ್ಷದ ನಾಯಕ ಮತ್ತು ಸಾಮಾಜಿಕ ಕಾರ್ಯಕರ್ತ ಅಶೋಕ್​ ಭಾರಧ್ವಾಜ್​ ಮುಂದಾಗಿದ್ದಾರೆ. ಇದಕ್ಕಾಗಿ ಅವರು ವಿಶ್ವದ ಬೃಹತ್​ ಗಾತ್ರದ ರಾಖಿ ತಯಾರಿಸಲು ಮುಂದಾಗಿದ್ದಾರೆ. ಈಗಾಗಲೇ ಭಾರಧ್ವಾಜ್​ ಹೆಸರು ಗಿನ್ನೆಸ್​ ಸೇರಿದಂತೆ ಅನೇಕ ದಾಖಲೆಗಳನ್ನು ಅಚ್ಚೊತ್ತಿದ್ದು, ಇದೀಗ ಒಎಂಜಿ ಬುಕ್​ ಆಫ್​ ರೆಕಾರ್ಡ್​ನಲ್ಲಿ ಆಗಸ್ಟ್​ 31ರ 2023ರಂದು ಸೇರಲಿದೆ. ಇದುವರೆಗೂ […]