ಬಿಲ್ಲವ ಯುವಕರು ಕೋಮು ಸಂಘರ್ಷದ ಕಡೆ ಗಮನಕೊಡದೆ ಶಿಕ್ಷಣ, ಉದ್ಯೋಗಕ್ಕೆ ಒತ್ತು ನೀಡಿ; ಉಡುಪಿಯಲ್ಲಿ ಪ್ರಣವಾನಂದ ಶ್ರೀ ಕರೆ

ಬಿಲ್ಲವ ಯುವಕರು ಕೋಮು ಸಂಘರ್ಷದ ಕಡೆ ಗಮನಹರಿಸದೆ, ಉದ್ಯೋಗ, ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳದ ರಾಷ್ಟ್ರೀಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಕರೆನೀಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆಗೆ ತೊಂದರೆ ಮಾಡಬಾರದು. ಈ ಭೂಮಿಯಲ್ಲಿ ನಮ್ಮ ಜೀವನ ಇರುವುದು ಸ್ವಲ್ಪ ದಿನ.‌ ಅದನ್ನು ಒಳ್ಳೆಯ ಕೆಲಸಕ್ಕೆ ಬಳಸಬೇಕು.‌ಯಾವುದೇ ಪಕ್ಷದಲ್ಲಿ ಇದ್ದರು ಅದರ ಸಿದ್ದಾಂತಕ್ಕೆ ಬದ್ಧರಾಗಿರಬೇಕೇ ಹೊರತು, ಇನ್ನೊಂದು ಜನಾಂಗಕ್ಕೆ ನೋವುಂಟು ಮಾಡುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.