ಪರಿಸರ ರಕ್ಷಣೆಗಾಗಿ ಹಿರಿಯಡ್ಕ ಕಾಜಾರಗುತ್ತಿನ ಯುವಕನ ಬೈಕ್ ಯಾತ್ರೆ.!
ಕಾರ್ಕಳ: ಪರಿಸರ ಉಳಿಸುವುದು ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯವಾಗಿದ್ದು, ಪರಿಸರ ಉಳಿದರೆ ಭೂಮಿ ಉಳಿಯುತ್ತದೆ ಎಂಬ ಉದ್ದೇಶವನ್ನುಟ್ಟುಕೊಂಡು ಭೂಮಿ, ಕಾಡು ಪ್ರಾಣಿ, ಪಕ್ಷಿ ಪರಿಸರ ಜಾಗೃತಿಗಾಗಿ ಸಿದ್ಧನಾಗಿರುವ ಉಡುಪಿ ಜಿಲ್ಲೆಯ ಹಿರಿಯಡ್ಕ ಕಾಜಾರಗುತ್ತುವಿನ ನಿವಾಸಿಯಾದ ಗುರುರಾಜ್ ನಾಯಕ್. ಗುರುರಾಜ್ ನಾಯಕ್ ಅವರು ಪರಿಸರ ಜಾಗೃತಿ ಮೂಡಿಸುವ ಮೂಲಕ ದೇಶವ್ಯಾಪ್ತಿಯಲ್ಲಿ ಸುಮಾರು 16,000 ಕಿ.ಮಿ ಬೈಕ್ ರ‍್ಯಾಲಿಯನ್ನು ಮಾಡಲು ಮುಂದಾಗಿದ್ದಾರೆ. ಬಾಲ್ಯದಲ್ಲಿಯೇ ಪರಿಸರದ ಮೇಲೆ ಅಪಾರ ಕಾಳಜಿ: ಮಣಿಪಾಲದ ಖಾಸಗಿ ಸಂಸ್ಥೆಯೊಂದರಲ್ಲಿ ಲೆಕ್ಕ ವಿಭಾಗದಲ್ಲಿ ವೃತ್ತಿ ನಿರ್ವಹಿಸುತ್ತಿರುವ ಇವರು […]