ಹಾಲ್ ಗೆ ನುಗ್ಗಿದ ಕಾರು: ತಪ್ಪಿದ ಅನಾಹುತ
ಮಂಗಳೂರು: ಪಾರ್ಕಿಂಗ್ ಸ್ಥಳದಿಂದ ಹೊರಹೋಗಲು ಯತ್ನಿಸಿದಾಗ ನಿಯಂತ್ರಣ ತಪ್ಪಿದ ಕಾರೊಂದು ನೇರವಾಗಿ ಚರ್ಚ್ ಹಾಲ್ ಗೆ ನುಗ್ಗಿದ ಘಟನೆ ಮಂಗಳೂರಿನ ಬಿಜೈನಲ್ಲಿ ನಡೆದಿದೆ. ಅಕ್ಕಪಕ್ಕದಲ್ಲೇ ಮಕ್ಕಳು ಓಡಾಡುತ್ತಿದ್ದು, ಪಾರ್ಕಿಂಗ್ ನ ಇಳಿಜಾರಿನಿಂದ ಕಾರು ವೇಗವಾಗಿ ಬರುತ್ತಿರುವುದನ್ನು ಗಮನಿಸಿದ ಪೋಷಕರು ಹಾಲ್ ನ ಮುಂಭಾಗ ನಿಂತಿದ್ದ ಮಕ್ಕಳನ್ನು ಹಿಡಿದು ಎಳೆದಿದ್ದಾರೆ. ಇದರಿಂದ ಆಗಬಹುದಾದ ಅನಾಹುತ ತಪ್ಪಿದೆ. ಚಾಲಕನ ನಿಯಂತ್ರಣ ತಪ್ಪಿ ಬಿಜೈನ ಚರ್ಚ್ ಹಾಲ್ ನ ಹಿಂಭಾಗದಲ್ಲಿರುವ ಮಿನಿ ಹಾಲ್ ಗೆ ನುಗ್ಗಿ ಕಾರು ಸಿಲುಕಿಗೊಂಡಿದೆ. ಘಟನೆಯಿಂದ ಸಭಾಂಗಣದ […]